ಗೋವಾ ಕ್ಯಾಸಿನೊ ಪ್ರಕರಣ | ಹಲವು ರಾಜ್ಯಗಳಲ್ಲಿ ಈ.ಡಿ. ದಾಳಿ : 2 ಕೋಟಿ.ರೂ. ವಶ

ಹೊಸದಿಲ್ಲಿ, ಸೆ. 30: ಗೋವಾ ಮೂಲದ ಕ್ಯಾಸಿನೊ ಹಾಗೂ ಅದರ ನಂಟು ಹೊಂದಿರುವ ಸಂಸ್ಥೆಗಳ ವಿರುದ್ಧ ಬಹು ರಾಜ್ಯಗಳಲ್ಲಿ ದಾಳಿ ನಡೆಸಿದ ಸಂದರ್ಭ 8.5 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಅಲ್ಲದೆ, 2.25 ಕೋ.ರೂ.ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಈ.ಡಿ.) ಸೋಮವಾರ ತಿಳಿಸಿದೆ.
ಗೋಲ್ಡನ್ ಗ್ಲೋಬ್ ಹೊಟೇಲ್ಸ್, ವರ್ಲ್ಡ್‌ವೈಡ್ ರಿಸೋರ್ಟ್ಸ್, ಎಂಟರ್‌ಟೈನ್‌ಮೆಂಟ್ ಆ್ಯಂಡ್ ಬಿಗ್ ಡ್ಯಾಡಿ ಕ್ಯಾಸಿನೊ ಹೆಸರಿನ ಕಂಪೆನಿಗಳ ಮೇಲೆ ಶನಿವಾರ ದಾಳಿ ನಡೆಸಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ)ಯ ನಿಯಮಗಳ ಅಡಿಯಲ್ಲಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ದಿಲ್ಲಿ-ಎನ್‌ಸಿಆರ್, ಮುಂಬೈ ಹಾಗೂ ರಾಜ್‌ಕೋಟ್‌ನ ಕನಿಷ್ಠ 15 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಪಣಜಿ ವಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Next Story





