ಅಗ್ನಿಪಥ ಯೋಜನೆ ಮುನ್ನ ಸೇನೆಗಳಿಗೆ ಆಯ್ಕೆಯಾದವರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಅಗ್ನಿಪಥ ಯೋಜನೆ(ಸಾಂದರ್ಭಿಕ ಚಿತ್ರ) | Photo: PTI
ಹೊಸದಿಲ್ಲಿ: ಅಗ್ನಿಪಥ ಯೋಜನೆಯನ್ನು ಪರಿಚಯಿಸುವ ಮುನ್ನ ರಕ್ಷಣಾ ಪಡೆಗಳಿಗೆ ಆಯ್ಕೆಯಾದವರನ್ನು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ನೂರಾರು ಯುವಕರು ಇಲ್ಲಿನ ಜಂತರ್ ಮಂತರ್ನಲ್ಲಿ ಗುರುವಾರ ಕೇಂದ್ರ ಸರಕಾರದ ವಿರುದ್ಧ ದರಣಿ ನಡೆಸಿದರು.
ಎಐಸಿಸಿ ಮಾಜಿ ಸೈನಿಕರ ವಿಭಾಗದ ಅಡಿಯಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು.
‘‘ಅಗ್ನಿಪಥ ಯೋಜನೆಯನ್ನು ಪರಿಚಯಿಸುವ ಮುನ್ನ ರಕ್ಷಣಾ ಪಡೆಗಳಲ್ಲಿ ನೇಮಕಾತಿಗಾಗಿ ಆಯ್ಕೆಯಾಗಿದ್ದ ಸುಮಾರು 1.5 ಲಕ್ಷ ಯುವಕರು ಇಲ್ಲಿವರೆಗೆ ಸೇರ್ಪಡೆಗಾಗಿ ಕಾಯುತ್ತಿದ್ದಾರೆ. ಅವರು ಎಲ್ಲಾ ಔಪಚಾರಿಕತೆಯನ್ನು ಪೂರ್ಣಗೊಳಿಸಿದ್ದಾರೆ ಹಾಗೂ ಅಂತಿಮ ಆಯ್ಕೆಗೆ ಅರ್ಹರಾಗಿದ್ದಾರೆ. ಈ ಯುವಕರು ಸೇನಾ ಪಡೆಗಳನ್ನು ಸೇರಲು ಅವಕಾಶ ನೀಡಿ ಎಂದು ನಾವು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇವೆ’’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಐಸಿಸಿಯ ಮಾಜಿ ಸೈನಿಕರವಿಭಾಗದ ಕರ್ನಲ್ (ನಿವೃತ್ತ) ರೋಹಿತ್ ಚೌಧರಿ ಹೇಳಿದ್ದಾರೆ.
Next Story