ಕಿಡ್ನಿ ಕಸಿ ದಂಧೆ : ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಜೈಲು ಸೇರಿದ್ದ ವೈದ್ಯನನ್ನು ವಶಕ್ಕೆ ಪಡೆದ ಪೊಲೀಸರು

Photo | timesofindia
ಪುಣೆ: ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕಿಡ್ನಿ ಕಸಿ ಜಾಲಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಗುರುವಾರ ಸಸೂನ್ ಜನರಲ್ ಆಸ್ಪತ್ರೆಯ ಮಾಜಿ ವೈದ್ಯಕೀಯ ಅಧೀಕ್ಷಕ ಡಾ. ಅಜಯ್ ತಾವಾರೆಯನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಪುಣೆಯ ಕಲ್ಯಾಣಿ ನಗರದಲ್ಲಿ ಇಬ್ಬರು ಮೃತಪಟ್ಟ ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ 17 ವರ್ಷದ ಬಾಲಕನ ರಕ್ತದ ಮಾದರಿಗಳನ್ನು ಬದಲಾಯಿಸಿದ್ದ ಪ್ರಕರಣದಲ್ಲಿ ತಾವಾರೆ ಸಧ್ಯ ಯೆರ್ವಾಡಾ ಕೇಂದ್ರ ಜೈಲಿನಲ್ಲಿದ್ದಾನೆ.
2022ರಲ್ಲಿ ರೂಬಿ ಹಾಲ್ ಕ್ಲಿನಿಕ್ನಲ್ಲಿ ಕಿಡ್ನಿ ಕಸಿ ದಂಧೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪೊಲೀಸರು ವೈದ್ಯ ಅಜಯ್ ತಾವರೆಯನ್ನು ಬಂಧಿಸಿದ್ದಾರೆ. ಗುರುವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ನಿಖಿಲ್ ಪಿಂಗಾಳೆ ಹೇಳಿದ್ದಾರೆ.
ಘಟನೆಯ ಸಮಯದಲ್ಲಿ ಅಜಯ್ ತಾವರೆ ಕಿಡ್ನಿ ಕಸಿಯನ್ನು ಅನುಮೋದಿಸುವ ಪ್ರಾದೇಶಿಕ ಅಧಿಕಾರ ಸಮಿತಿಯ ಮುಖ್ಯಸ್ಥನಾಗಿದ್ದ. ಈ ಪ್ರಕರಣದಲ್ಲಿ 15 ಜನರ ವಿರುದ್ಧ ದೂರ ದಾಖಲಾಗಿದೆ.
ಈ ಹಿಂದೆ ಅಜಯ್ ತಾವರೆ ಐಶಾರಾಮಿ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಪೊಲೀಸರು ಸಂಗ್ರಹಿಸಿದ್ದ 17 ವರ್ಷ ವಯಸ್ಸಿನ ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿ ಬೇರೊಬ್ಬರ ರಕ್ತವನ್ನು ಇರಿಸಿದ್ದ. ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು.





