Punjab | ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ

Credit: PTI Photo
ಜಲಂಧರ್(ಪಂಜಾಬ್), ಡಿ. 15: ಇಲ್ಲಿನ ಹಲವು ಶಾಲೆಗಳು ಸೋಮವಾರ ಬಾಂಬ್ ಬೆದರಿಕೆಯ ಇಮೇಲ್ ಸ್ವೀಕರಿಸಿವೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗಳಿಂದ ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ವಿದ್ಯುತ್ ಪೂರೈಕೆಯಲ್ಲಿ ಏನೋ ದೋಷವಿದೆ ಎಂದು ನಮಗೆ ತಿಳಿಸಲಾಯಿತು ಹಾಗೂ ನಮ್ಮ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವಂತೆ ಸೂಚಿಸಲಾಯಿತು’’ ಎಂದು ವಿದ್ಯಾರ್ಥಿಗಳ ಹೆತ್ತವರು ಹೇಳಿದ್ದಾರೆ.
‘‘ಶಾಲಾ ಕಟ್ಟಡವನ್ನು ಧ್ವಂಸಗೊಳಿಸಲಾಗುವುದು ಎಂದು ಬೆದರಿಕೆ ಒಡ್ಡಿದ ಇಮೇಲ್ಗಳನ್ನು ಶಾಲೆಗಳ ಮುಖ್ಯೋಪಾಧ್ಯಾಯರು ಸ್ವೀಕರಿಸಿದ್ದಾರೆ’’ ಎಂದು ಎಸಿಪಿ (ಉತ್ತರ) ಸಂಜಯ್ ಕುಮಾರ್ ತಿಳಿಸಿದ್ದಾರೆ.
ಸೈಬರ್ ಪೊಲೀಸ್ನ ತಂಡ ಇಮೇಲ್ನ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
Next Story





