ಪಂಜಾಬಿ ನಟಿ ಸೋನಿಯಾ ಮಾನ್ ಆಪ್ ಪಕ್ಷಕ್ಕೆ ಸೇರ್ಪಡೆ

ಸೋನಿಯಾ ಮಾನ್ , ಅರವಿಂದ್ ಕೇಜ್ರಿವಾಲ್ | PC : NDTV
ಚಂಡೀಗಢ: ಪಂಜಾಬಿ ನಟಿ, ಕೀರ್ತಿ ಕಿಸಾನ್ ಯೂನಿಯನ್ ನಾಯಕ ಬಲದೇವ್ ಸಿಂಗ್ ಅವರ ಪುತ್ರಿ ಸೋನಿಯಾ ಮಾನ್ ಆಪ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಆಪ್ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಸೋನಿಯಾ ಮಾನ್ ಆಪ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಈ ಕುರಿತು ಆಪ್ ಪಂಜಾಬ್ ಘಟಕವು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಕೀರ್ತಿ ಕಿಸಾನ್ ಯೂನಿಯನ್ ನಾಯಕ ಎಸ್ ಬಲದೇವ್ ಸಿಂಗ್ ಅವರ ಪುತ್ರಿ ಮತ್ತು ಪಂಜಾಬಿ ನಟಿ ಸೋನಿಯಾ ಮಾನ್ ಅವರು ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಸೋನಿಯಾ ಮಾನ್ ಅವರಿಗೆ ಆಪ್ ಕುಟುಂಬಕ್ಕೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.
ಸೋನಿಯಾ ಮಾನ್ ಮಲಯಾಳಂ, ಹಿಂದಿ, ತೆಲುಗು ಮತ್ತು ಮರಾಠಿ ಸೇರಿದಂತೆ ವಿವಿಧ ಭಾಷೆಗಳ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 'ಹೈಡ್ ಎನ್ ಸೀಕ್' ಎಂಬ ಮಲಯಾಳಂ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಸೋನಿಯಾ ಮಾನ್, 2014ರಲ್ಲಿ ಕಹಿನ್ ಹೈ ಮೇರಾ ಪ್ಯಾರ್ ಎಂಬ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದರು.





