ಆಪ್ ನ ಅಪ್ರಾಮಾಣಿಕ ವ್ಯಕ್ತಿಗಳ ಪಟ್ಟಿಯಲ್ಲಿ ರಾಹುಲ್ ಗಾಂಧಿ ಗೆ ಸ್ಥಾನ!
ಪೋಸ್ಟರ್ ನಲ್ಲಿ ಕಾಣಿಸಿಕೊಂಡ ವಿಪಕ್ಷ ನಾಯಕ

ರಾಹುಲ್ ಗಾಂಧಿ | PTI
ಹೊಸದಿಲ್ಲಿ: ತನ್ನ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯ ಪೋಸ್ಟರ್ ವಾರ್ ಗೆ ಆಪ್ ಚುರುಕು ನೀಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಚುನಾವಣಾ ಪೋಸ್ಟರ್ ಗಳಲ್ಲಿ ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ಥಾನ ಪಡೆದಿದ್ದಾರೆ.
ಈ ಪ್ರಚೋದನಾಕಾರಿ ಪೋಸ್ಟರ್ ನ ಅಡಿಬರಹದಲ್ಲಿ, “ಕೇಜ್ರಿವಾಲ್ ರ ಪ್ರಾಮಾಣಿಕತೆ ಎಲ್ಲ ಅಪ್ರಾಮಾಣಿಕ ವ್ಯಕ್ತಿಗಳನ್ನು ಎತ್ತಿ ಒಗೆಯಲಿದೆ” ಎಂದು ಬರೆಯಲಾಗಿದೆ. ಈ ಪೋಸ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಸಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ದಿಲ್ಲಿ ಬಿಜೆಪಿ ನಾಯಕರನ್ನೂ ಮುದ್ರಿಸಲಾಗಿದೆ. ಆದರೆ, ಈ ಪೋಸ್ಟರ್ ನಲ್ಲಿ ರಾಹುಲ್ ಗಾಂಧಿ ಭಾವಚಿತ್ರ ಕಾಣಿಸಿಕೊಳ್ಳುವ ಮೂಲಕ ಆಪ್-ಕಾಂಗ್ರೆಸ್ ಮೈತ್ರಿ ಸಾಧ್ಯತೆ ಮುರಿದು ಬಿದ್ದಿದೆ ಎಂಬುದನ್ನು ಹೇಳುತ್ತಿದೆ.
ಕೇಜ್ರಿವಾಲ್ ರ ಆಡಳಿತದ ದಾರಿಯ ಕುರಿತು ಗಾಂಧಿ ಸಹೋದರ ಸಹೋದರಿಯರು ದಾಳಿ ನಡೆಸಿದ ನಂತರ ಈ ಪೋಸ್ಟರ್ ಬೆಳಕಿಗೆ ಬಂದಿದೆ. ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರ ಸಾಧನೆಗಳನ್ನು ಸರಿಗಟ್ಟಲಾಗುವುದಿಲ್ಲ ಎಂದು ಗಾಂಧಿ ಸಹೋದರ ಸಹೋದರಿಯರು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು.





