ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ | ವಿಚಾರಣೆ ಜು.14ಕ್ಕೆ ಮುಂದೂಡಿಕೆ

ರಾಹುಲ್ ಗಾಂಧಿ | PC : PTI
ಸುಲ್ತಾನ್ಪುರ(ಉ.ಪ್ರ.): ಇಲ್ಲಿಯ ಜನಪ್ರತಿನಿಧಿಗಳ ನ್ಯಾಯಾಲಯವು ಕೇಂದ್ರ ಗೃಹಸಚಿವ ಅಮಿತ್ ಶಾ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿದೆ.
ಬಿಜೆಪಿ ನಾಯಕ ವಿಜಯ ಮಿಶ್ರಾ ಅವರು 2018ರಲ್ಲಿ ರಾಹುಲ್ ವಿರುದ್ಧ ಮಾನನಷ್ಟ ದೂರನ್ನು ದಾಖಲಿಸಿದ್ದರು.
ಬುಧವಾರ ನ್ಯಾಯಾಲಯವು ಸಾಕ್ಷಿಯೋರ್ವರ ವಿಚಾರಣೆಯನ್ನು ನಡೆಸಲಿತ್ತು. ಆದರೆ ಸಾಕ್ಷಿಯ ಗೈರುಹಾಜರಿಯಿಂದಾಗಿ ಜು.14ಕ್ಕೆ ಮುಂದೂಡಲಾಗಿದೆ ಎಂದು ಮಿಶ್ರಾ ಪರ ವಕೀಲರು ತಿಳಿಸಿದರು.
ಫೆ.2024ರಲ್ಲಿ ತನ್ನ ಮುಂದೆ ಶರಣಾಗಿದ್ದ ರಾಹುಲ್ಗೆ ನ್ಯಾಯಾಲಯವು ತಲಾ 25,000 ರೂ.ಗಳ ಎರಡು ಭದ್ರತೆಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಿತ್ತು.
ಜು.26,2024ರಂದು ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿದ್ದ ರಾಹುಲ್, ತಾನು ನಿರಪರಾಧಿ ಎಂದು ಪ್ರತಿಪಾದಿಸಿದ್ದರಲ್ಲದೆ ಪ್ರಕರಣವು ತನ್ನ ವಿರುದ್ಧ ಷಡ್ಯಂತ್ರದ ಭಾಗವಾಗಿದೆ ಎಂದು ತಿಳಿಸಿದ್ದರು.
2018ರ ಕರ್ನಾಟಕ ವಿಧಾನಸಭಾ ಚುನಾವಣೆಗಳ ಪ್ರಚಾರದ ಸಂದರ್ಭ ರಾಹುಲ್ ಅವರು ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮಿಶ್ರಾ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.







