ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮೃತ್ಯು: ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸಂತಾಪ

ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ (File Photo: PTI)
ಹೊಸದಿಲ್ಲಿ: ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನರಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
"ಅಜಿತ್ ಪವಾರ್ ಅವರು ವಿಮಾನ ಅಪಘಾತ ದುರಂತದಲ್ಲಿ ಮೃತಪಟ್ಟಿರುವುದು ತೀವ್ರ ಆಘಾತಕಾರಿ ಹಾಗೂ ಖೇದಕರವಾಗಿದೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
"ದೀರ್ಘಕಾಲೀನ ರಾಜಕೀಯ ಭವಿಷ್ಯ ಹೊಂದಿದ್ದ ಭರವಸೆಯ ನಾಯಕನೊಬ್ಬನ ನಷ್ಟ ಇದಾಗಿದೆ. ಈ ಕ್ಲಿಷ್ಟಕರ ಸಮಯದಲ್ಲಿ ಅವರ ಕುಟುಂಬದ ಸದಸ್ಯರ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುವುದಿಲ್ಲ. ಅಜಿತ್ ಪವಾರ್ ಕುಟುಂಬಕ್ಕೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ" ಎಂದು ಹೇಳಿದ್ದಾರೆ.
"ಮಹಾರಾಷ್ಟ್ರದ ವಿವಿಧ ಸಾಂವಿಧಾನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅಜಿತ್ ಪವಾರ್ ಅವರನ್ನು ಓರ್ವ ಮಾಗಿದ ರಾಜಕಾರಣಿಯನ್ನಾಗಿ ಸ್ಮರಿಸಬೇಕಿದೆ. ಅವರು ಜನರೆಡೆಗೆ ಪ್ರಾಮಾಣಿಕತೆ ಹಾಗೂ ಅರ್ಪಣಾ ಮನೋಭಾವದಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಅಜಿತ್ ಪವಾರ್ ಸಾವಿಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡಾ ಸಂತಾಪ ವ್ಯಕ್ತಪಡಿಸಿದ್ದು, "ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು ದುಃಖದಾಯಕವಾಗಿದೆ. ಈ ಶೋಕದ ಸಂದರ್ಭದಲ್ಲಿ ನಾವು ಮಹಾರಾಷ್ಟ್ರದ ಜನತೆಯೊಂದಿಗಿದ್ದೇವೆ. ಅಜಿತ್ ಪವಾರ್ ಕುಟುಂಬ ಹಾಗೂ ಮಹಾರಾಷ್ಟ್ರ ಜನತೆಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ" ಎಂದು ಹೇಳಿದ್ದಾರೆ.
The news of the tragic demise of Shri Ajit Pawar, in a plane crash, is deeply shocking and profoundly distressing. It is an untimely loss of a leader who had a long and promising political career ahead.
— Mallikarjun Kharge (@kharge) January 28, 2026
No words can adequately express the immense grief that the bereaved family…
महाराष्ट्र के उप मुख्यमंत्री श्री अजित पवार जी और उनके सहयात्रियों की आज हवाई जहाज दुर्घटना में निधन का समाचार अत्यंत पीड़ादायक है।
— Rahul Gandhi (@RahulGandhi) January 28, 2026
इस शोक के पल में महाराष्ट्र की जनता के साथ हूं। समस्त पवार परिवार और प्रियजनों को इस दुख की घड़ी में अपनी संवेदनाएं व्यक्त करता हूं।







