ನ್ಯಾಯ ಯಾತ್ರೆಯನ್ನು ಪಶ್ಚಿಮ ಬಂಗಾಳದಿಂದ ಪುನರಾರಂಭಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಕೋಲ್ಕತಾ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ’ಭಾರತ ಜೋಡೊ ನ್ಯಾಯ ಯಾತ್ರೆ’ಯು ಎರಡು ದಿನಗಳ ವಿರಾಮದ ಬಳಿಕ ರವಿವಾರ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಿಂದ ಪುನರಾರಂಭಗೊಂಡಿತು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ ರಂಜನ ಚೌಧುರಿ ಅವರೊಂದಿಗೆ ಎಸ್ ಯು ವಿ ಮೇಲೆ ಕುಳಿತುಕೊಂಡು ಜಲಪೈಗುರಿ ಪಟ್ಟಣದಲ್ಲಿ ಸಂಚರಿಸಿದ ರಾಹುಲ್ ಈ ವೇಳೆ ವೀಕ್ಷಕರತ್ತ ಕೈ ಬೀಸಿದರು.
ರಾತ್ರಿ ಸಿಲಿಗುರಿ ಸಮೀಪ ತಂಗಿರುವ ಯಾತ್ರೆಯು ಸೋಮವಾರ ಉತ್ತರ ದಿನಾಜ್ಪುರ ಜಿಲ್ಲೆಯ ಇಸ್ಲಾಮ್ ಪುರಕ್ಕೆ ತೆರಳಿ ಬಳಿಕ ಬಿಹಾರವನ್ನು ಪ್ರವೇಶಿಸಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೋರ್ವರು ತಿಳಿಸಿದರು.
ರವಿವಾರ ಬೆಳಿಗ್ಗೆ ಸಿಲಿಗುರಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ರನ್ನು ಚೌಧುರಿ ಸ್ವಾಗತಿಸಿದರು.
ಜ.31ರಂದು ಮಾಲ್ಡಾ ಮೂಲಕ ಪ.ಬಂಗಾಳವನ್ನು ಮರುಪ್ರವೇಶಿಸುವ ಯಾತ್ರೆಯ ಮುರ್ಷಿದಾಬಾದ್ ಮೂಲಕ ಪ್ರಯಾಣಿಸಿ ಫೆ.1ರಂದು ರಾಜ್ಯದಿಂದ ನಿರ್ಗಮಿಸಲಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯದಲ್ಲಿ ಭಾರತ ಜೋಡೊ ನ್ಯಾಯ ಯಾತ್ರೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸುವಂತೆ ಆಗ್ರಹಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪತ್ರವನ್ನು ಬರೆದಿದ್ದಾರೆ