ಲೋಕೊ ಪೈಲಟ್, ಗಾರ್ಡ್ಗಳ ಕುಂದುಕೊರತೆ ಪರಿಹಾರಕ್ಕಾಗಿ ಉನ್ನತ ಸಮಿತಿ ರಚಿಸಿದ ರೈಲ್ವೆ ಮಂಡಳಿ

PC : PTI
ಹೊಸದಿಲ್ಲಿ : ಲೋಕೊ ಪೈಲಟ್ಗಳ ಹಾಗೂ ಗಾರ್ಡ್ಗಳ ಕುಂದುಕೊರತೆ ಪರಿಹಾರಕ್ಕಾಗಿ ರೈಲ್ವೆ ಮಂಡಳಿ ಉನ್ನತ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದೆ.
ಲೋಕೊ ಪೈಲಟ್ಗಳ ಹಾಗೂ ಗಾರ್ಡ್ಗಳ ಬಹುದಿನದ ಬೇಡಿಕೆಗೆ ಸ್ಪಂದಿಸಿದ ರೈಲ್ವೆ ಮಂಡಳಿ ನಿರ್ಧಾರವನ್ನು ಲೋಕೊಪೈಲಟ್ಗಳ ಹಾಗೂ ಗಾರ್ಡ್ಗಳ ಸಂಘ ಸ್ವಾಗತಿಸಿದೆ. ಸಮಿತಿಯಲ್ಲಿ ರೈಲ್ವೆಯ ವಿವಿಧ ವಲಯಗಳಿಂದ ನೇಮಿಸಲ್ಪಡುವ ಐವರು ಸದಸ್ಯರಿರುತ್ತಾರೆ. ಜುಲೈ 11ರಂದು ಈ ನಿರ್ಧಾರ ಹೊರ ಬಿದ್ದಿದ್ದು ಸಮಿತಿ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ.
Next Story





