2023 ರಲ್ಲಿ ರೈಲು ಅಪಘಾತಗಳಲ್ಲಿ ಸುಮಾರು 22,000 ಜನರು ಸಾವನ್ನಪ್ಪಿದ್ದಾರೆ ಎಂದ ಕುನಾಲ್ ಕಾಮ್ರಾ; ರೈಲ್ವೆಯಿಂದ Fact Check

Photo credit: PTI, X/Kunal Kamra
►ಇದು Fact Check ಅಲ್ಲ, Double Check ಎಂದ ಜನರು
ಹೊಸದಿಲ್ಲಿ: 2023ರಲ್ಲಿ ರೈಲು ಅಪಘಾತಗಳಲ್ಲಿ 22,000 ಜನರು ಸಾವನ್ನಪ್ಪಿದ್ದಾರೆ ಎಂಬ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಹೇಳಿಕೆಗೆ ಭಾರತೀಯ ರೈಲ್ವೆ ಅಧಿಕೃತವಾಗಿ Fact Check ಮಾಡಿದ್ದು, ಕಾಮ್ರಾ ಅವರ ವೈರಲ್ ಆಗಿರುವ ವಿಡಿಯೋದಲ್ಲಿ ದಾರಿ ತಪ್ಪಿಸುವ ಮಾಹಿತಿಗೆ ಇದೆ. ಇಂತಹ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಎಂದು ಜನರಿಗೆ ಮನವಿ ಮಾಡಿದೆ.
ರೈಲ್ವೆಯ ಈ ಹೇಳಿಕೆಗೆ ಕಾಮ್ರಾ ತಕ್ಷಣ ಪ್ರತಿಕ್ರಿಯಿಸಿ, ತಾವು ಮಾಡಿದ ಹೇಳಿಕೆಗಳಲ್ಲಿ ನಿಖರವಾಗಿ ಯಾವ ಅಂಶಗಳು ತಪ್ಪು ಎಂಬುದಕ್ಕೆ ವಿವರಣೆ ಕೇಳಿದರು.
ಇದಕ್ಕೆ ರೈಲ್ವೆ ನೀಡಿದ Fact Checkನಲ್ಲಿ, 2023ರಲ್ಲಿ “ಸುಮಾರು 25,000 ಅಪಘಾತಗಳು” ಸಂಭವಿಸಿವೆ ಎಂಬ ಕಾಮ್ರಾ ಹೇಳಿಕೆಯನ್ನು ತಪ್ಪೆಂದು ತಳ್ಳಿಹಾಕಿ, ವಾಸ್ತವ ಸಂಖ್ಯೆ 24,678 ಎಂದು ತಿಳಿಸಿದೆ. ಹಾಗೆಯೇ “ಸುಮಾರು 22,000 ಸಾವುಗಳು” ಎನ್ನುವ ಹೇಳಿಕೆಗೆ ವಿರುದ್ಧವಾಗಿ, 21,803 ಸಾವುಗಳು ನಡೆದಿವೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಈ Fact Check ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು, “ಇದು Fact Check ಅಲ್ಲ, Double Check!”, “ನಿಜಕ್ಕೂ ಇದು ಏನಾದ್ರೂ ಪರಿಶೀಲನೆಯಾ?”, “ಅಂದಾಜು ಅರ್ಥವಾಗುತ್ತದೆಯಾ?” ಎಂದು ವ್ಯಂಗ್ಯವಾಡಿದ್ದಾರೆ. ಹಲವರು ಕಮೆಂಟ್ಗಳ ಮೂಲಕ ಛೇಡಿಸಿದ್ದಾರೆ.
ಕಾಮ್ರಾ ಮೊದಲು ಮಾಡಿದ್ದ ಇತರೆ ಆರೋಪಗಳನ್ನೂ ರೈಲ್ವೆ ತಳ್ಳಿಹಾಕಿದೆ. ಲೋಕೋ-ಪೈಲಟ್ಗಳು ನಿರಂತರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಹೇಳಿಕೆಗೆ, HOER ಕಾಯ್ದೆಯ ಪ್ರಕಾರ ಸ್ಪಷ್ಟವಾದ ಕೆಲಸ–ವಿಶ್ರಾಂತಿ ಮಿತಿ ನಿಗದಿಯಾಗಿದೆ ಎಂದು ರೈಲ್ವೆ ಹೇಳಿದೆ.
ಪ್ರತಿ ವರ್ಷ 400 ಟ್ರ್ಯಾಕ್ಮೆನ್ ಸಾವನ್ನಪ್ಪುತ್ತಾರೆ ಎನ್ನುವ ಅಂಕಿಯೂ ಒಂದು ವರ್ಷದದ್ದಲ್ಲ, ಹಲವು ವರ್ಷಗಳ ಒಟ್ಟಾರೆ ಸಂಖ್ಯೆ ಎಂದು ತಿಳಿಸಿದೆ.
ಸಿಗ್ನಲ್ ವೈಫಲ್ಯದಿಂದ ಅಪಘಾತಗಳು ಹೆಚ್ಚಿವೆ ಎನ್ನುವ ಹೇಳಿಕೆಗೂ ರೈಲ್ವೆ ತಿರುಗೇಟು ನೀಡಿದ್ದು, 2004–14ರ ಅವಧಿಯಲ್ಲಿ 1,711 ಪ್ರಕರಣಗಳು ದಾಖಲಾಗಿದ್ದರೂ, 2023ರಲ್ಲಿ 34 ಕ್ಕೆ ಮತ್ತು ಈ ವರ್ಷ ಇದುವರೆಗೂ 10 ಕ್ಕೆ ಇಳಿದಿವೆ ಎಂದು ವಿವರಿಸಿದೆ.
ಹೊಸ ಹಳಿಗಳ ನಿರ್ಮಾಣಕ್ಕೆ ಬಜೆಟ್ ನಲ್ಲಿ ಕಡಿಮೆ ಮೊತ್ತ ನಿಗದಿ ಮಾಡಲಾಗಿದೆ ಎಂಬ ಆರೋಪಕ್ಕೂ ಉತ್ತರ ನೀಡಿದ ರೈಲ್ವೆ, 2017–18ರ 8,884 ಕೋಟಿ ರೂಪಾಯಿಯಿಂದ 2022–23ರಲ್ಲಿ 16,558 ಕೋಟಿ ರೂಪಾಯಿಗೆ ಬಜೆಟ್ ಏರಿಕೆಯಾಗಿದೆ ಹಾಗು 2023–24ರಲ್ಲಿ 5,950 ಕಿ.ಮೀ. ಹೊಸ ಹಳಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದೆ.
ಕಾಮ್ರಾ–ರೈಲ್ವೆ ನಡುವಿನ ಈ ‘Fact Check ’ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದ್ದು, ಜನರು ಇದನ್ನು ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
Refer to the details in the video for the correct facts.#IRFactCheck https://t.co/hdsfn2Wv3k pic.twitter.com/zYBW7SHiLC
— Railway Fact Check (@IRFactCheck) November 20, 2025
Refer to the details in the video for the correct facts.#IRFactCheck https://t.co/hdsfn2Wv3k pic.twitter.com/zYBW7SHiLC
— Railway Fact Check (@IRFactCheck) November 20, 2025
This not fact check, this double verification of claim 😂😂😂
— Galactus (@Galactsx) November 20, 2025
ಕೃಪೆ: deccanherald.com







