ರಾಜಸ್ಥಾನ | ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿದ ತಂದೆ; ನೇಣಿಗೆ ಶರಣಾದ ಬಾಲಕ

ಸಾಂದರ್ಭಿಕ ಚಿತ್ರ | Photo Credit : freepik.com
ಜೈಪುರ,ನ.6: ಮೊಬೈಲ್ ಗೇಮ್ ಆಡಿದ್ದಕ್ಕೆ ತಂದೆ ಬೈದಿದ್ದರಿಂದ ನೊಂದ 13ರ ಹರೆಯದ ಬಾಲಕ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಧೋಲಪುರ ಜಿಲ್ಲೆಯ ಕುರೇಂದ್ರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ತಂದೆ ಬೈದಿದ್ದರಿಂದ ಸಿಟ್ಟಾಗಿದ್ದ ವಿಷ್ಣು ತನ್ನ ಕೋಣೆಯನ್ನು ಸೇರಿಕೊಂಡಿದ್ದ. ತಾಯಿ ಊಟಕ್ಕೆ ಕರೆದಾಗ ಆತ ಪ್ರತಿಕ್ರಿಯಿಸಿರಲಿಲ್ಲ. ಕೋಣೆಯೊಳಗೆ ಪ್ರವೇಶಿಸಿ ನೋಡಿದಾಗ ಆತ ನೇಣು ಬಿಗಿದುಕೊಂಡಿದ್ದು ಕಂಡು ಬಂದಿತ್ತು. ಕುಟುಂಬ ಸದಸ್ಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೋಲಿಸರು ತಿಳಿಸಿದರು.
Next Story





