ರಾಜಸ್ಥಾನ| ಮಹಿಳಾ ಕಾನ್ಸ್ಟೇಬಲ್ ಅತ್ಯಾಚಾರ ಆರೋಪ: ಎಸ್ಐ, ಇಬ್ಬರು ಕಾನ್ಸ್ಟೇಬಲ್ಗಳ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | Photo Credit : freepik
ಜೈಪುರ, ಜ. 8: ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಮಹಿಳಾ ಕಾನ್ಸ್ಟೇಬಲ್ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸಬ್ ಇನ್ಸ್ಪೆಕ್ಟರ್, ಇಬ್ಬರು ಕಾನ್ಸ್ಟೇಬಲ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2017ರಲ್ಲಿ ಸರ್ದಾರ್ಶಹರ್ ಪೊಲೀಸ್ ಠಾಣೆಯಲ್ಲಿ ನಿಯೋಜಿತಳಾಗಿದ್ದಾಗ ತನಗೆ ನಾಲ್ವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಕಾನ್ಸ್ಟೇಬಲ್ ಚುರು ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದಾರೆ ಎಂದು ಸಿದ್ಧ್ಮುಖ್ ಎಸ್ಎಚ್ಒ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಮಹಿಳಾ ಕಾನ್ಸ್ಟೆಬಲ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರ ವಿರುದ್ಧ ಸಿದ್ಧ್ಧ್ಮುಖ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಲ್ಲಿ ಘಟನೆ ನಡೆದ ಸಂದರ್ಭ ಸರ್ದಾರ್ಶಹರ್ ಪೊಲೀಸ್ ಠಾಣೆಯ ಎಸ್ಎಚ್ಒ ಆಗಿದ್ದ ಸಬ್ ಇನ್ಸ್ಪೆಕ್ಟರ್ ಸುಭಾಷ್ ಸೇರಿದ್ದಾರೆ. ಇತರ ಇಬ್ಬರು ಆರೋಪಿಗಳಾದ ರವೀಂದ್ರ ಹಾಗೂ ಜೈವೀರ್ರನ್ನು ಆಗ ಆ ಪೊಲೀಸ್ ಠಾಣೆಗೆ ಕಾನ್ಸ್ಟೇಬಲ್ಗಳನ್ನಾಗಿ ನಿಯೋಜಿಸಲಾಗಿತ್ತು. ಪ್ರಕರಣದ ನಾಲ್ಕನೇ ಆರೋಪಿ ವಿಕ್ಕಿ ಎಂದು ಅವರು ತಿಳಿಸಿದ್ದಾರೆ.





