Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಂಸತ್ತಿನಲ್ಲಿ ಸಂಸದರ ಆಸನದಲ್ಲೇ ನೋಟಿನ...

ಸಂಸತ್ತಿನಲ್ಲಿ ಸಂಸದರ ಆಸನದಲ್ಲೇ ನೋಟಿನ ಕಂತೆ ಪತ್ತೆ ; ಹಳ್ಳ ಹಿಡಿದ ತನಿಖೆ?

ವಾರ್ತಾಭಾರತಿವಾರ್ತಾಭಾರತಿ14 March 2025 6:35 PM IST
share
ಸಂಸತ್ತಿನಲ್ಲಿ ಸಂಸದರ ಆಸನದಲ್ಲೇ ನೋಟಿನ ಕಂತೆ ಪತ್ತೆ ; ಹಳ್ಳ ಹಿಡಿದ ತನಿಖೆ?

ಸಂಸದರ ಆಸನದಲ್ಲೇ ನಗದು ಪತ್ತೆಯಾಗಿದೆ ಎಂದು ಸದನದಲ್ಲೇ ಹೇಳಿಕೆ ನೀಡಿದ್ದ ಸಭಾಪತಿ ಧನ್ಕರ್ ಈಗ ಆ ಬಗ್ಗೆ ಮಾತಾಡುತ್ತಲೇ ಇಲ್ಲ. ಸಂಸತ್ತಿನೊಳಗೆ ಬಂದು ಹಣದ ಕಂತೆ ಇಟ್ಟವರು ಯಾರು ಎಂದು ಪತ್ತೆಯಾಗಿಲ್ಲ ಎಂದಾದರೆ ಅದು ಗಂಭೀರ ಭದ್ರತಾ ಲೋಪ. ಲೋಕಸಭೆ ಹಾಗು ರಾಜ್ಯಸಭೆಗಳ ಕಾರ್ಯಾಲಯಗಳು ಈ ವಿಷಯದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ.

ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿಯ ಅವರ ಆಸನದಲ್ಲಿ ನಗದು ಪತ್ತೆಯಾಗಿದ್ದ ಪ್ರಕರಣದ ಕುರಿತು ಮಾಹಿತಿ ಇಲ್ಲವೆಂದು ರಾಜ್ಯಸಭೆ ಹೇಳಿದೆ.

ಡಿಸೆಂಬರ್ 2024ರಲ್ಲಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನಖರ್ ಅವರು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿಯ ಆಸನದ ಬಳಿಯಿಂದ ನಗದು ಪತ್ತೆಯಾಗಿದೆ ಎಂದು ಸಂಸತ್ತಿನಲ್ಲೇ ಘೋಷಿಸಿದ್ದರು. ಆದರೆ, ಸಾರ್ವಜನಿಕ ಮಾಹಿತಿ ಹಕ್ಕು (ಆರ್‌ಟಿಐ) ಮೂಲಕ ಕೇಳಿದ ಪ್ರಶ್ನೆಗೆ ರಾಜ್ಯಸಭೆ ಮತ್ತು ಲೋಕಸಭಾ ಎರಡರ ಕಾರ್ಯಲಯಗಳೂ ಈ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಉತ್ತರಿಸಿವೆ.

2024ರ ಡಿಸೆಂಬರ್ 5ರಂದು, ಸಂಸತ್ ಭವನದಲ್ಲಿ ಪ್ರತಿದಿನದಂತೆ CISF (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ಎಂಟಿ-ಸ್ಯಾಬೋಟಾಜ್ (ವಿಸ್ಫೋಟಕ ತಪಾಸಣಾ) ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ, ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರ ಆಸನ ಸಂಖ್ಯೆ 222 ಹತ್ತಿರ ನಗದು ಬಂಡಲ್ ಒಂದು ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಸಭಾಪತಿ ಜಗದೀಪ್ ಧನಖರ್ ರಾಜ್ಯಸಭೆಯಲ್ಲಿ ಘೋಷಿಸಿದರು. ಇದು 500 ರೂಪಾಯಿಯ 100 ನೋಟುಗಳಾಗಿದ್ದು, ಅವು ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ತನಿಖೆಯ ನಂತರವೇ ನಿರ್ಧರಿಸಬಹುದು ಎಂದು ಹೇಳಿದ್ದರು.

ಈ ವಿಷಯ ಬಹಿರಂಗವಾದ ನಂತರ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಟಾಪಟಿ ತೀವ್ರಗೊಂಡಿತು. ಕಾಂಗ್ರೆಸ್ ನಾಯಕರು ಈ ಘಟನೆಯನ್ನು ಸರ್ಕಾರದ ತಂತ್ರ ಎಂದು ಕರೆದರೆ, ಬಿಜೆಪಿಯವರು ಇದನ್ನು ಭ್ರಷ್ಟಾಚಾರದ ಹೊಸ ಉದಾಹರಣೆ ಎಂದು ಬಣ್ಣಿಸಿದರು. ಆದರೆ ಈಗ ಆರ್‌ಟಿಐ ಮೂಲಕ ಬಹಿರಂಗವಾದ ಸಂಗತಿ ಏನಪ್ಪಾ ಅಂದ್ರೆ — ಈ ಪ್ರಕರಣದ ಕುರಿತು ಯಾವುದೇ ತನಿಖೆ ನಡೆದೇ ಇಲ್ಲ.

ಬಿಹಾರದ ಸಾಮಾಜಿಕ ಕಾರ್ಯಕರ್ತ ಕನ್ಹಯ್ಯ ಕುಮಾರ್ ಅವರು 2024ರ ಡಿಸೆಂಬರ್ 25ರಂದು ರಾಜ್ಯಸಭಾ ಕಾರ್ಯಲಯಕ್ಕೆ ಆರ್‌ಟಿಐ ಅರ್ಜಿ ಸಲ್ಲಿಸಿ, ಈ ಪ್ರಕರಣದ ತನಿಖೆಯ ಬಗ್ಗೆ ಮಾಹಿತಿಯನ್ನು ಕೇಳಿದರು.

ಅವರ ಪ್ರಶ್ನೆಗಳು ಈ ರೀತಿಯಾಗಿದ್ದವು:

1. ಈ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದೆಯಾ?

2. ತನಿಖೆಯ ಪ್ರಸ್ತುತ ಸ್ಥಿತಿ ಏನು?

3. ತನಿಖೆ ಮುಗಿದಿದ್ದರೆ, ಅದರ ವರದಿ ನೀಡಬಹುದೇ?

4. ಈ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಬಹುದೇ?

2025ರ ಜನವರಿ 9ರಂದು, ರಾಜ್ಯಸಭಾ ಕಾರ್ಯಲಯ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿತು. ಈ ಪ್ರಕರಣವನ್ನು ಲೋಕಸಭಾ ಕಾರ್ಯಲಯಕ್ಕೆ ವರ್ಗಾಯಿಸಿತು. ಆದರೆ, 2025ರ ಫೆಬ್ರವರಿ 6ರಂದು ಲೋಕಸಭಾ ಕಾರ್ಯದರ್ಶಾಲಯವೂ ಈ ಪ್ರಕರಣ ರಾಜ್ಯಸಭೆಯ ಜವಾಬ್ದಾರಿಯಾಗಿದೆ ಎಂದು ಹೇಳಿ ಪಾಸ್ ಮಾಡಿತು.

ಸಿಸಿಟಿವಿ ದೃಶ್ಯಾವಳಿಗಳನ್ನು ಕೊಡಲು ಸಾಧ್ಯವಿಲ್ಲ ಎಂಬ ಕಾರಣವನ್ನು "ಭದ್ರತಾ ಕಾರಣ" ಎಂದು ಉಲ್ಲೇಖಿಸಿ, ಮಾಹಿತಿ ನೀಡಲು ನಿರಾಕರಿಸಲಾಯಿತು.

ಡಿಸೆಂಬರ್ 2024ರಲ್ಲಿ ಕಾಂಗ್ರೆಸ್ ಸಂಸದರು ಅದಾನಿ ಹಗರಣದ ಕುರಿತಾಗಿ ಸಂಸತ್ ಚರ್ಚೆಗೆ ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿಯೇ ಈ ನಗದು ಪತ್ತೆಯಾದ ಬಗ್ಗೆ ದೊಡ್ಡ ಪ್ರಚಾರ ನಡೆಸಲಾಯಿತು. ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಅವರ ಪ್ರಕಾರ, ಇದು ಸಂಪೂರ್ಣ ಪೂರ್ವಯೋಜಿತ ರಾಜಕೀಯ ನಾಟಕ.

"ಅದಾನಿ ಹಗರಣದ ಬಗ್ಗೆ ಚರ್ಚೆ ನಡೆಯಬಾರದು ಎಂಬ ಸರ್ಕಾರದ ತಂತ್ರದ ಫಲವೇ ಈ ನಕಲಿ ಕುತಂತ್ರ. ನಾವು ಅದಾನಿ ವಿಷಯದಲ್ಲಿ ಕಾನೂನುಬದ್ಧ ತನಿಖೆ ಮತ್ತು ಚರ್ಚೆಗೆ ಕೇಳಿದಾಗ, ಈ ಹೊಸ ವಿವಾದ ಸೃಷ್ಟಿಸಲಾಯಿತು," ಎಂದು ಅವರು ಟೀಕಿಸಿದ್ದಾರೆ.

ಅಭಿಷೇಕ್ ಮನು ಸಿಂಘ್ವಿ ಅವರೂ ಇದನ್ನು "ಹಾಸ್ಯಾಸ್ಪದ" ಎಂದು ಕರೆಯುತ್ತಾ, "ನಾನು ನನ್ನ ಆಸನದ ಸುತ್ತ ತಂತಿಗಳನ್ನು ಹಾಕಬೇಕಾ? ಈ ಪ್ರಕರಣದ ಹಿಂದಿನ ಸತ್ಯವನ್ನು ಬಹಿರಂಗಪಡಿಸಬೇಕು" ಎಂದಿದ್ದರು.

ಈ ಪ್ರಕರಣದಲ್ಲಿ ಬಹುಮುಖ್ಯ ಪ್ರಶ್ನೆ ಒಂದೇ.

ರಾಜ್ಯಸಭೆಯ ಸೀಟಿನಿಂದ ನಗದು ಪತ್ತೆಯಾಗಿದೆಯೆಂದು ಘೋಷಿಸಿದ ಸಭಾಪತಿಗಳೇ ಇದನ್ನು ಗಂಭೀರವೆಂದು ಪರಿಗಣಿಸಿದ್ದರು. ಹಾಗಾದರೆ, ಈ ಬಗ್ಗೆ ಸರಿಯಾದ ತನಿಖೆ ನಡೆಸಿಲ್ಲವೆ? ತನಿಖೆ ನಡೆದಿದೆಯಾದರೆ, ಅದರ ವರದಿ ಎಲ್ಲಿದೆ? ಮತ್ತು ರಾಜ್ಯಸಭಾ ಕಾರ್ಯಲಯ ಹಾಗೂ ಲೋಕಸಭಾ ಕಾರ್ಯಲಯ ಪರಸ್ಪರ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ಪಾಸ್ ಮಾಡುತ್ತಿರುವುದೇಕೆ?

ಒಬ್ಬ ಸಂಸದನ ಆಸನದಲ್ಲಿ ನಗದು ಪತ್ತೆಯಾಗಿದೆ ಎಂದರೆ, ಅದು ದೇಶದ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ದೊಡ್ಡ ವಿಷಯವಾಗಬೇಕಲ್ಲವೇ? ಇಲ್ಲದಿದ್ದರೆ ಇದು ಕಾಂಗ್ರೆಸ್ ನಾಯಕರು ಹೇಳಿದ ಹಾಗೆ ಆ ಇಡೀ ಪ್ರಕರಣ ಒಂದು ಪೂರ್ವಯೋಜಿತ ಪ್ರಹಸನವಾಗಿತ್ತೇ ಎಂದು ಕೇಳಲೇಬೇಕಾಗುತ್ತದೆ.

ಈ ವಿಚಾರಗಳು ಸ್ಪಷ್ಟವಾಗದೆ ಇದ್ದರೆ , ಸಂಸತ್ತಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಏಳಲಿವೆ . ಇದು ಸತ್ಯವಾಗಿದ್ದರೆ, ಈ ಪ್ರಕರಣದ ತನಿಖೆ ನಡೆಸಲು ಒಂದು ಸಮರ್ಥ ಸಮಿತಿ ನೇಮಕ ಮಾಡಬೇಕಲ್ಲವೇ ?

ಹೊಸ ಸಂಸತ್ತಿನಲ್ಲಿ ಈಗಾಗ್ಲೇ ಒಂದು ದೊಡ್ಡ ಸುರಕ್ಷತಾ ವೈಫಲ್ಯದ ಪ್ರಕರಣ ನಡೆದಿದೆ. ಹೋಗೆ ಬಾಂಬ್ ಇಟ್ಟುಕೊಂಡವರು ಸಂಸತ್ತಿನಲ್ಲಿ ಸದನದ ಒಳಗೂ ಬಂದಿದ್ದಾರೆ. ಈಗ ಈ ನೋಟಿನ ಪ್ರಕರಣವೂ ಬಹಳ ನಿಗೂಢವಾಗಿದೆ. ಯಾರು ಬಂದು ಅಲ್ಲಿ ಆ ನೋಟಿನ ಕಂತೆ ಇಟ್ಟರು ಎಂಬುದಕ್ಕೆ ಉತ್ತರ ಸಿಗದೇ ಇದ್ದರೆ ಅದು ನಿಜಕ್ಕೂ ಕಳವಳಕಾರಿ ವಿಷಯ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X