ಚೆಕ್ ಬೌನ್ಸ್ ಪ್ರಕರಣ | ರಾಮ್ ಗೋಪಾಲ್ ವರ್ಮಾಗೆ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ ಮುಂಬೈ ನ್ಯಾಯಾಲಯ

ರಾಮ್ ಗೋಪಾಲ್ ವರ್ಮಾ | PTI
ಮುಂಬೈ : ಚೆಕ್ ಬೌನ್ಸ್ ಪ್ರಕರಣದಲ್ಲಿ ತನಗೆ ವಿಧಿಸಿದ ಜೈಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿರುವ ಮುಂಬೈಯ ಸೆಷನ್ಸ್ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಜನವರಿ 21ರಂದು ಅಂಧೇರಿಯ ನ್ಯಾಯಾಂಗ ದಂಡಾಧಿಕಾರಿ (ಪ್ರಥಮ ದರ್ಜೆ) ವೈ.ಪಿ. ಪೂಜಾರಿ, ನೆಗೋಷಿಯೆಬಲ್ ಇನ್ಸ್ಟ್ರುಮೆಟ್ ಕಾಯ್ದೆ ಅಡಿಯಲ್ಲಿ ವರ್ಮಾ ಅವರು ತಪ್ಪೆಸಗಿರುವುದನ್ನು ಕಂಡುಕೊಂಡಿದ್ದರು.ದಂಡಾಧಿಕಾರಿಯವರು ವರ್ಮಾಗೆ ಮೂರು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ದೂರುದಾರನಿಗೆ 3 ತಿಂಗಳ ಒಳಗೆ 3,72,219 ರೂ. ಪಾವತಿಸುವಂತೆ ಆದೇಶಿಸಿದ್ದರು.
ಕಾರಾಗೃಹ ಶಿಕ್ಷೆಯನ್ನು ರದ್ದುಗೊಳಿಸುವಂತೆ ವರ್ಮಾ ಅವರು ಸೆಷನ್ಸ್ ನ್ಯಾಯಾಲಯವನ್ನು ಮನವಿ ಮಾಡಿದ್ದರು. ಆದರೆ, ಮಾರ್ಚ್ 4ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಎ.ಎ. ಕುಲಕರ್ಣಿ ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
Next Story





