ಸಂಸತ್ತಿನಲ್ಲಿ ‘‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮಾ’’ ಪ್ರದರ್ಶನ

PC : NDTV
ಹೊಸದಿಲ್ಲಿ: 1993ರ ಜಪಾನೀಸ್-ಭಾರತೀಯ ಅನಿಮೇಟೆಡ್ ಚಲನಚಿತ್ರ ‘‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮಾ’’ವನ್ನು ಸಂಸತ್ತಿನಲ್ಲಿ ಫೆಬ್ರವರಿ 15ರಂದು ಪ್ರದರ್ಶಿಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ ಎಂದು ಚಲನಚಿತ್ರ ವಿತರಣಾ ಕಂಪೆನಿ ಗ್ರೀನ್ ಪಿಕ್ಚರ್ ರವಿವಾರ ಹೇಳಿದೆ.
ಪತ್ರಿಕಾ ಪ್ರಕಟಣೆ ಪ್ರಕಾರ ಪ್ರದರ್ಶದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಂಸತ್ತಿನ ಸದಸ್ಯರು ಹಾಗೂ ಸಾಸಂಸ್ಕೃತಿಕ ವಲಯದ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.
‘‘ಈ ಚಿತ್ರ ಪ್ರದರ್ಶನಕ್ಕೆ ಭಾರತದ ಸಂಸತ್ತು ಅವಕಾಶ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ಕೆಲಸವನ್ನು ಇಂತಹ ಪ್ರತಿಷ್ಠಿತ ಮಟ್ಟದಲ್ಲಿ ಗುರುತಿಸುವುದನ್ನು ನೋಡುವುದು ಒಂದು ಸೌಭಾಗ್ಯ’’ ಎಂದು ಅದು ಹೇಳಿದೆ.
‘‘ಈ ಪ್ರದರ್ಶನ ಕೇವಲ ಚಿತ್ರದ ಪ್ರದರ್ಶನವಲ್ಲ. ಬದಲಾಗಿ ನಿರಂತರ ಸ್ಪೂರ್ತಿ ಹಾಗೂ ಮಾರ್ಗದರ್ಶನ ನೀಡುವ ನಮ್ಮ ಸಮೃದ್ಧ ಪರಂಪರೆ ಹಾಗೂ ರಾಮಾಯಣದ ಕಾಲಾತೀತ ಕಥೆಯ ಆಚರಣೆ’’ ಎಂದು ಗ್ರೀಕ್ ಪಿಕ್ಚರ್ಸ್ನ ಸಹ-ಸಂಸ್ಥಾಪಕ ಅರ್ಜುನ್ ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮಾ’’ ಚಲನಚಿತ್ರ ಮೂಲ ಇಂಗ್ಲೀಷ್ ಆವೃತ್ತಿಯೊಂದಿಗೆ ಹಿಂದಿ, ತಮಿಳು ಹಾಗೂ ತೆಲುಗು ಡಬ್ಬಿಂಗ್ನಲ್ಲಿ ಜನವರಿ 24ರಂದು 4ಕೆ ಮಾದರಿಯಲ್ಲಿ ಬಿಡುಗಡೆಯಾಗಲಿದೆ.





