ದಿಲ್ಲಿ ಕಾಲ್ತುಳಿತದಲ್ಲಿ ಕನಿಷ್ಠ 120 ಸಾವನ್ನಪ್ಪಿರುವುದನ್ನು ಕೇಂದ್ರ ಸರಕಾರ ಮರೆಮಾಚುತ್ತಿದೆ: ರಾವತ್

ಸಂಜಯ್ ರಾವತ್ | PC : PTI
ಹೊಸದಿಲ್ಲಿ: ನಗರದ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 120 ಮಂದಿ ಮೃತಪಟ್ಟಿದ್ದರೂ, ಸರಕಾರವು ಕೇವಲ 18 ಮಂದಿ ಅಸುನೀಗಿದ್ದಾರೆಂದು ಹೇಳಿಕೊಳ್ಳುತ್ತಿದೆಯೆಂದು ಶಿವಸೇನಾ (ಉದ್ಧವ್ ಬಣ) ವಕ್ತಾರ್ ಸಂಜಯ್ ರಾವತ್ ರವಿವಾರ ಆಪಾದಿಸಿದ್ದಾರೆ.
‘‘ನನಗೆ ಲಭ್ಯವಿರುವ ಮಾಹಿತಿಯ ಪ್ರಕಾರ ದಿಲ್ಲಿ ಕಾಲ್ತುಳಿತದಲ್ಲಿ 120ರಿಂದ 150 ಸಾವನ್ನಪ್ಪಿದ್ದಾರೆ. ಸರಕಾರವು ನೈಜ ಅಂಕಿ ಅಂಶಗಳನ್ನು ಮುಚ್ಚಿಟ್ಟಿದೆ", ಎಂದು ರಾವತ್ ಹೇಳಿಕೆಯನ್ನು ಲೋಕ್ಸತ್ತಾ ಪತ್ರಿಕೆಯು ಉಲ್ಲೇಖಿಸಿದೆ.
ಯಾತ್ರಾರ್ಥಿಗಳು ಪ್ರಯಾಗ್ ರಾಜ್ ಗೆ ತೆರಳುತ್ತಿರುವುದರಿಂದ ಕಳೆದ ನಾಲ್ಕು ದಿನಗಳಿಂದ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ವಿಪರೀತ ಜನದಟ್ಟಣೆ ಉಂಟಾಗಿದೆ. ಮಧ್ಯಪ್ರದೇಶ, ಬಿಹಾರ ಹಾಗೂ ಉತ್ತರಪ್ರದೇಶಗಳಿಂದ ಭಾರೀ ಸಂಖ್ಯೆಯ ಯಾತ್ರಿಕರು ಕುಂಭಮೇಳಕ್ಕೆ ತೆರಳುತ್ತಿದ್ದಾರೆ. ಎಂದು ರಾವತ್ ಹೇಳಿದ್ದಾರೆ. ಕೆಲವು ಉದ್ರಿಕ್ತ ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ದಾಂಧಲೆ ನಡೆಸಿದ್ದಾರೆಂದು ಅವರು ಆಪಾದಿಸಿದ್ದಾರೆ.
ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶದ ಸರಕಾರದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾವತ್, ಪ್ರಯಾಗ್ ರಾಜ್ ನಲ್ಲಿ ಪುಣ್ಯಸ್ನಾನಕ್ಕೆಂದು ಆಗಮಿಸಿ ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಪ್ರಯಾಗರಾಜ್ ನ ಮಹಾಕುಂಭಮೇಳದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಕೂಡಾ ಬಿಜೆಪಿ ಮುಚ್ಚಿಹಾಕುತ್ತಿದೆ ಎಂದು ಆಪಾದಿಸಿದ್ದಾರೆ.
ವಿವಿಧ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಟಕಿ, ಬಾಗಿಲುಗಳನ್ನು ರೈಲನ್ನು ಪ್ರವೇಶಿಸುತ್ತಿದ್ದಾರೆ. ಪ್ರಯಾಣಿಕರು ದುಂಡಾವರ್ತನೆಯಲ್ಲಿ ತೊಡಗಿದ್ದಾರೆಂದು ಲೋಕಸತ್ತಾ ಪತ್ರಿಕೆಯ ವರದಿ ತಿಳಿಸಿದೆ.