ಇಸ್ರೇಲ್ - ಇರಾನ್ ನಡುವೆ ಸಂಘರ್ಷ; ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ

Photo credit: PTI
ಹೊಸದಿಲ್ಲಿ: ಇಸ್ರೇಲ್ ಹಾಗೂ ಇರಾನ್ ನಡುವೆ ಉಂಟಾಗಿರುವ ಸಂಘರ್ಷಕ್ಕೆ ರಾಜ ತಾಂತ್ರಿಕ ಹಿನ್ನೆಲೆಯಲ್ಲಿ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ.
ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಮೇಲೆ ಸೂಕ್ಷ್ಮ ನಿಗಾ ವಹಿಸಿದೆ ಎಂದು ಭಾರತ ಸರಕಾರವು ಹೇಳಿದೆ. ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸದಂತೆ ಉಭಯ ದೇಶಗಳು ಎಚ್ಚರಿಕೆ ವಹಿಸುವಂತೆಯೂ ಒತ್ತಾಯಿಸಿತು.
ರಾಜತಾಂತ್ರಿಕವಾಗಿ ವಿವಾದವನ್ನು ಶಮನಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿನಂತಿಸಿದೆ.
ಉಭಯ ದೇಶಗಳೊಂದಿಗೆ ಭಾರತ ನಿಕಟ ವ್ಯವಹಾರಿಕ ಹೊಂದಿದೆ. ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದ ಇರುವಂತೆಯೂ ಕೇಂದ್ರ ವಿದೇಶಾಂಗ ಸಚಿವಾಲಯ (ಎಂಇಎ) ಸಲಹೆ ನೀಡಿದೆ.
Next Story





