ರೇಖಾ ಗುಪ್ತಾ ದಿಲ್ಲಿಯ ಸಿಎಂ ಆಗಿ ನೇಮಕಗೊಂಡ ಬಳಿಕ ಹಿಂದಿನ ಪ್ರತಿಭಟನೆಗಳ ವೀಡಿಯೊಗಳು ವೈರಲ್

ರೇಖಾ ಗುಪ್ತಾ | PTI
ಹೊಸದಿಲ್ಲಿ : ರೇಖಾ ಗುಪ್ತಾ ಅವರು ದಿಲ್ಲಿಯ ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿ ನೇಮಕಗೊಂಡ ಬಳಿಕ ಅವರ ಹಳೆಯ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಅವರು ದಿಲ್ಲಿ ಮಹಾನಗರ ಪಾಲಿಕೆ(ಎಂಸಿಡಿ) ಕಚೇರಿಯಲ್ಲಿ ಮೈಕ್ಗಳನ್ನು ಮತ್ತು ವೇದಿಕೆಯನ್ನು ಧ್ವಂಸಗೊಳಿಸುತ್ತಿರುವುದನ್ನು ಅದು ತೋರಿಸಿದೆ.
ಜೊತೆಗೆ ಇನ್ನೊಂದು ವೀಡಿಯೊ ಕೂಡ ವೈರಲ್ ಆಗಿದ್ದು, ದಿಲ್ಲಿಯ ಜವಾಹರಲಾಲ್ ನೆಹರು ವಿವಿ(ಜೆಎನ್ಯು) ಕುರಿತು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದನ್ನು ಮತ್ತು ‘ಜೆಎನ್ಯು ಮುಚ್ಚಿ’ ಎಂಬ ಘೋಷಣೆಯನ್ನು ಕೂಗುತ್ತಿರುವುದನ್ನು ಅದರಲ್ಲಿ ಕಾಣಬಹುದು.
BJP Mayor Candidate @gupta_rekha की हार की बौखलाहट देखिये‼️
— Aam Aadmi Party- Uttar Pradesh (@AAPUttarPradesh) February 23, 2023
Supreme Court के निर्णय के बावजूद, पूरी रात सदन में
▪️हंगामा किया
▪️तोड़फोड़ की
▪️मारपीट और गुंडागर्दी की
और Standing Committee का Election नहीं होने दिया pic.twitter.com/sPvKBRqWgL
2023,ಫೆಬ್ರವರಿಯಲ್ಲಿ ದಿಲ್ಲಿ ಮಹಾನಗರ ಪಾಲಿಕೆ ಹುದ್ದೆಗೆ ನಡೆದಿದ್ದ ಚುನಾವಣೆಯಲ್ಲಿ ಆಪ್ನ ಶೆಲ್ಲಿ ಒಬೆರಾಯ್ ಅವರು ರೇಖಾ ಗುಪ್ತಾರನ್ನು 34 ಮತಗಳ ಅಂತರದಿಂದ ಸೋಲಿಸಿದ್ದರು. ಒಟ್ಟು 266 ಮತಗಳ ಪೈಕಿ ಒಬೆರಾಯ್ಗೆ 150 ಮತಗಳು ದಕ್ಕಿದ್ದರೆ ಗುಪ್ತಾ 116 ಮತಗಳನ್ನು ಪಡೆದಿದ್ದರು.
ರೇಖಾ ಗುಪ್ತಾ ದಿಲ್ಲಿಯ ಒಂಭತ್ತನೇ ಮುಖ್ಯಮಂತ್ರಿ ಹಾಗೂ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ.
साले फ्री का खाते हैं…… 10 रू की फ़ीस में पढ़ते हैं, फ़ीस बढ़ने का विरोध करते हो, देशद्रोही!! जेएनयू को तुरंत बंद करना चाहिए~ दिल्ली की मुख्यमंत्री
— Priyanka Bharti (@priyanka2bharti) February 19, 2025
OP धनखड़ (पर्यवेक्षक) ने कहा था “ बिहार से महिलाओं को हरियाणा ला कर लड़कों से शादी करायेंगे” उन्होंने ही इस नगीने की पहचान की है! pic.twitter.com/wthgNKxjkg







