ಕಳೆದ 10 ವರ್ಷಗಳ ಮತದಾರರ ಪಟ್ಟಿ, ವಿಡಿಯೊ ರೆಕಾರ್ಡಿಂಗ್ ತಕ್ಷಣವೇ ಬಿಡುಗಡೆ ಮಾಡಿ: ಚುನಾವಣಾ ಆಯೋಗಕ್ಕೆ ರಾಹುಲ್ ಆಗ್ರಹ

PC: x.com/ani_digital
ಬೆಂಗಳೂರು: ಬಿಜೆಪಿಯ ಸಿದ್ಧಾಂತವೇ ಸಂವಿಧಾನ ವಿರೋಧಿಯಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮತಗಳ್ಳತನ ಆರೋಪ ಸಂಬಂಧ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಈ ದೇಶದ ಬಡವರು, ರೈತರು, ಕಾರ್ಮಿಕರಿಗೆ ಸಂವಿಧಾನವು ರಕ್ಷಣೆಯನ್ನು ನೀಡುತ್ತದೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ದೇಶದ ಸಂವಿಧಾನದ ರಕ್ಷಣೆಗಾಗಿ ಹೋರಾಡಲಿದ್ದಾರೆ ಎಂದು ಹೇಳಿದರು.
ಕಳೆದ 10 ವರ್ಷಗಳ ಮತದಾರರ ಪಟ್ಟಿ ಹಾಗೂ ವಿಡಿಯೊ ರೆಕಾರ್ಡಿಂಗ್ ಅನ್ನು ತಕ್ಷಣವೇ ಚುನಾವಣಾ ಆಯೋಗವು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ರಾಹುಲ್ ಗಾಂಧಿ ಅವರು, ಒಂದು ವೇಳೆ ನಮಗೆ ಮಾಹಿತಿಯನ್ನು ಕೊಡದಿದ್ದರೆ ಒಂದು ಕ್ಷೇತ್ರವಲ್ಲ 25 ಕ್ಷೇತ್ರಗಳ ಮಾಹಿತಿಯನ್ನು ಬಹಿರಂಗ ಮಾಡಲಿದ್ದೇವೆ. ನಮ್ಮ ಬಳಿ ದಾಖಲೆಗಳಿವೆ. ನೀವಿದನ್ನು ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ವಿಪಕ್ಷಗಳ ಸವಾಲನ್ನು ಎದರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಲೆಕ್ಟ್ರಾನಿಕ್ ಅಂಕಿಅಂಶಗಳನ್ನು ಚುನಾವಣಾ ಆಯೋಗ ಏಕೆ ನೀಡುತ್ತಿಲ್ಲ ಎಂಬುದನ್ನು ಇಡೀ ದೇಶವೇ ಅರಿತುಕೊಳ್ಳಬೇಕು. ನಾನು ವಿರೋಧ ಪಕ್ಷದ ನಾಯಕನಾಗಿರಬಹುದು. ಆದರೆ ನಾನು ಈ ಹೋರಾಟದಲ್ಲಿ ಒಬ್ಬಂಟಿಯಲ್ಲ. ವಿಪಕ್ಷಗಳ ಎಲ್ಲ ನಾಯಕರು ನನ್ನೊಂದಿಗೆ ಇದ್ದಾರೆ ಎಂದರು.
#WATCH | Bengaluru | At 'Vote Adhikaar Rally', Congress MP & LoP Lok Sabha, Rahul Gandhi says, "...BJP's ideology is against the Constitution of India. Every Congress leader and worker will protect it...Election Commission of India should give us the voter lists and video… pic.twitter.com/TerNtmzGZX
— ANI (@ANI) August 8, 2025







