ಸ್ವದೇಶಕ್ಕೆ ವಾಪಸ್ಸಾಗುವುದು ಅಸಾಧ್ಯ; ಶೇಕ್ ಹಸೀನಾ ಹೇಳಿದ್ದೇನು?

PC: x.com/IndiaToday
ಹೊಸದಿಲ್ಲಿ: ವಿದ್ಯಾರ್ಥಿ ಕ್ರಾಂತಿಯ ಬಳಿಕ ಬಾಂಗ್ಲಾದೇಶ ಪ್ರಧಾನಿ ಹುದ್ದೆಯಿಂದ ಪದಚ್ಯುತರಾಗಿ ಭಾರತಕ್ಕೆ ಪಲಾಯನ ಮಾಡಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾ, ಮುಂದಿನ ಚುನಾವಣೆಯಲ್ಲಿ ತಮ್ಮ ಅವಾಮಿ ಲೀಗ್ ಪಕ್ಷವನ್ನು ಹೊರಗಿಟ್ಟು ರಚಿಸುವ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ತಾವು ಸ್ವದೇಶಕ್ಕೆ ಮರಳಲು ಸಾಧ್ಯವಾಗದು ಎಂದು ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷದ ಆಗಸ್ಟ್ ನಲ್ಲಿ ಪದಚ್ಯುತಗೊಂಡಬಳಿಕ ಮೊಟ್ಟಮೊದಲ ಬಾರಿಗೆ ರಾಯ್ಟರ್ಸ್ಗೆ ಇ-ಮೇಲ್ ಸಂದರ್ಶನ ನೀಡಿದ 78 ವರ್ಷ ವಯಸ್ಸಿನ ನಾಯಕಿ, ಮುಂದಿನ ವರ್ಷ ನಡೆಯುವ ಚುನಾವಣೆಯನ್ನು ತಮ್ಮ ಲಕ್ಷಾಂತರ ಬೆಂಬಲಿಗರು ಬಹಿಷ್ಕರಿಸಲಿದ್ದಾರೆ ಎಂದು ಹೇಳಿದ್ದಾರೆ. ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿರುವುದು ನ್ಯಾಯಸಮ್ಮತವಲ್ಲದ ಮತ್ತ ಸ್ವಯಂ ಸೋಲಿನ ಕ್ರಮ ಎಂದು ವಿಶ್ಲೇಷಿಸಿದ್ದಾರೆ.
ಲಕ್ಷಾಂತರ ಮಂದಿ ಅವಾಮಿಲೀಗ್ ಬೆಂಬಲಿಗರು ಚುನಾವಣೆ ಬಹಿಷ್ಕರಿಸಿದರೆ ದೇಶದಲ್ಲಿ ರಾಜಕೀಯ ವ್ಯವಸ್ಥೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
ದೇಶಭ್ರಷ್ಟಾಗಿರುವ ಅವಾಮಿ ಲೀಗ್ ನಾಯಕಿ ಪ್ರಧಾನಿಯಾಗಿ ಪದಚ್ಯುತಿಗೊಂಡ ಬಳಿಕ ದೆಹಲಿಯಲ್ಲಿ ವಾಸವಿದ್ದು, ಹೊಸದಿಲ್ಲಿಯಲ್ಲಿ ಮುಕ್ತವಾಗಿ ವಾಸ್ತವ್ಯ ಹೊಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಹಸೀನಾ ಇಬ್ಬರು ಭದ್ರತಾ ಸಿಬ್ಬಂದಿಯ ಜತೆ ರಾಜಧಾನಿಯ ಲೋಧಿ ಗಾರ್ಡನ್ ನಲ್ಲಿ ತಿರುಗಾಡುತ್ತಿರವುದನ್ನು ಇತೀಚೆಗೆ ರಾಯ್ಟರ್ಸ್ ಪ್ರಚುರಪಡಿಸಿತ್ತು.







