ಬಿಹಾರ ಚುನಾವಣೆಯಲ್ಲಿ ಸೋಲು | ಲಾಲು, ಆರ್ಜೆಡಿಗೆ ತೀವ್ರ ಹಿನ್ನಡೆ

ಲಾಲುಪ್ರಸಾದ್ ಯಾದವ್ , ತೇಜಸ್ವಿ ಯಾದವ್ |Photo Credit : PTI
ಪಾಟ್ನಾ, ನ. 14: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ಆರ್ಜೆಡಿ ಮತ್ತು ಅದರ ಸ್ಥಾಪಕ ಲಾಲುಪ್ರಸಾದ್ ಯಾದವ್ ಗೆ ತೀವ್ರ ಹಿನ್ನಡೆಯನ್ನು ತಂದಿದೆ.
ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ, ಕಿರಿಯ ಮಗ ತೇಜಸ್ವಿ ಯಾದವ್ ಆರಂಭದಲ್ಲಿ ಅನುಭವಿಸಿದ ಹಿನ್ನಡೆ ಆರ್ಜೆಡಿಗೆ ದೊಡ್ಡ ಹೊಡೆತವಾಗಿದೆ.
ಹದಿನೈದು ವರ್ಷಗಳ ಆರ್ಜೆಡಿ ಆಳ್ವಿಕೆಯ ವೇಳೆ ಬಿಹಾರ ಕಂಡ ಜಂಗಲ್ ರಾಜ್ ಹಾಲಿ ಚುನಾವಣಾ ಹಿನ್ನಡೆಯಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಪಕ್ಷದದ ಭದ್ರಕೋಟೆ ರಾಘೋಪುರದಲ್ಲಿ ಒಂದು ಹಂತದಲ್ಲಿ ತೇಜಸ್ವಿ ಹಿನ್ನಡೆ ಅನುಭವಿಸಿದರು. ಈ ಕ್ಷೇತ್ರದಿಂದ ಲಾಲು ಮತ್ತು ತೇಜಸ್ವಿಯ ತಾಯಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಆಯ್ಕೆಯಾಗಿದ್ದರು.
2015ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತೇಜಸ್ವಿ ಸುಲಭವಾಗಿ ಗೆಲ್ಲಬೇಕಾಗಿತ್ತು. ಒಂದು ಹಂತದಲ್ಲಿ, ಅವರು 5,000 ಮತಗಳ ಹಿನ್ನಡೆಯನ್ನೂ ಅನುಭವಿಸಿದರು. ಆದರೆ, ಅಂತಿಮವಾಗಿ, 10,000ಕ್ಕಿಂತ ಅಧಿಕ ಮತಗಳ ಅಂತರದಿಂದ ಗೆದ್ದರು.





