ಕಳಪೆ ಹೆಲ್ಮೆಟ್ ತಯಾರಕರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರದ ಸೂಚನೆ

AI image
ಹೊಸದಿಲ್ಲಿ: ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಳಪೆ ಗುಣಮಟ್ಟದ ಹೆಲ್ಮೆಟ್ ಗಳನ್ನು ಮಾರಾಟ ಮಾಡುತ್ತಿರುವ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಕೇಂದ್ರವು ರಾಜ್ಯಗಳಿಗೆ ಸೂಚಿಸಿದೆ.
ಭಾರತೀಯ ಮಾನದಂಡಗಳ ಸಂಸ್ಥೆ(ಬಿಐಎಸ್)ಯಿಂದ ಪ್ರಮಾಣೀಕೃತ ಹೆಲ್ಮೆಟ್ಗಳನ್ನು ಮಾತ್ರ ಬಳಸುವಂತೆ ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಬಿಐಎಸ್ ದೇಶಾದ್ಯಂತ ಬಳಕೆದಾರರಿಗೆ ಮನವಿ ಮಾಡಿಕೊಂಡಿವೆ ಎಂದು ಶನಿವಾರ ಅಧಿಕೃತ ಹೇಳಿಕೆಯು ತಿಳಿಸಿದೆ.
ಬಿಐಎಸ್ ಪ್ರಮಾಣೀಕರಣವಿಲ್ಲದ ಹೆಲ್ಮೆಟ್ ಗಳ ತಯಾರಿಕೆ ಅಥವಾ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳಿಗೆ ಕರೆ ನೀಡಿರುವ ಇಲಾಖೆಯು,ಭಾರತದ ರಸ್ತೆಗಳಲ್ಲಿ 21 ಕೋಟಿಗೂ ಅಧಿಕ ದ್ವಿಚಕ್ರ ವಾಹನಗಳಿದ್ದು,ಮೋಟರ್ ವಾಹನಗಳ ಕಾಯ್ದೆ,1988ರಡಿ ಹೆಲ್ಮೆಟ್ಗಳನ್ನು ಧರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ. ಕಳಪೆ ಗುಣಮಟ್ಟದ ಹೆಲ್ಮೆಟ್ ಗಳ ಮಾರಾಟವು ಸುರಕ್ಷತೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಅದು ಬೆಟ್ಟು ಮಾಡಿದೆ.
Next Story