ಬಿʼಹಾರ್ʼ | ರೋಹಿಣಿಯನ್ನು ಅನುಸರಿಸಿದ ಸೋದರಿಯರು

ರೋಹಿಣಿ ಆಚಾರ್ಯ , ಲಾಲು ಪ್ರಸಾದ್ ಯಾದವ್ | Photo Credit : PTI
ಪಾಟ್ನಾ: ರೋಹಿಣಿ ಆಚಾರ್ಯ ಅವರ ಬೆನ್ನಿಗೇ ಅವರ ಸೋದರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರೂ ರವಿವಾರ ಬೆಳಿಗ್ಗೆ ತಮ್ಮ ಮಕ್ಕಳೊಂದಿಗೆ ಲಾಲು ಪ್ರಸಾದ್ ಯಾದವ್ ಅವರ ಪಾಟ್ನಾ ನಿವಾಸವನ್ನು ತೊರೆದು ದಿಲ್ಲಿಗೆ ತೆರಳಿದ್ದಾರೆ.
ಇದು ಬಿಹಾರದ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬದಲ್ಲಿ ಕಚ್ಚಾಟ ಇನ್ನಷ್ಟು ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸಿದೆ. ಈಗ ಲಾಲು,ಪತ್ನಿ ರಾಬ್ಡಿದೇವಿ ಮತ್ತು ಇನ್ನೋರ್ವ ಪುತ್ರಿ ಮಿಸಾ ಭಾರ್ತಿ ಅವರು ಮಾತ್ರ ಒಂದು ಕಾಲದಲ್ಲಿ ಆರ್ಜೆಡಿ ನಾಯಕರು ಮತ್ತು ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ಮನೆಯಲ್ಲಿ ಉಳಿದುಕೊಂಡಿದ್ದಾರೆ.
Next Story





