2018 ರಿಂದ ಕೇಂದ್ರ ಸರ್ಕಾರ ತನ್ನ ಯೋಜನೆಗಳ ಪ್ರಚಾರಕ್ಕಾಗಿ ಮಾಡಿದ ಖರ್ಚು ರೂ. 3,100 ಕೋಟಿ: ಲೋಕಸಭೆಗೆ ಸಚಿವರಿಂದ ಮಾಹಿತಿ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕುರ್ (PTI)
ಹೊಸದಿಲ್ಲಿ: ಕೇಂದ್ರ ಸರ್ಕಾರ 2018-19ರಿಂದ ವಿವಿಧ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ರೂ. 3,100.42 ಕೋಟಿ ಖರ್ಚು ಮಾಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕುರ್ ಗುರುವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಆರ್ಥಿಕ ವರ್ಷ 2022-23ರಲ್ಲಿ ಸರ್ಕಾರ ಸೆಂಟ್ರಲ್ ಬ್ಯುರೋ ಆಫ್ ಕಮ್ಯುನಿಕೇಶನ್ಸ್ ಮೂಲಕ ತನ್ನ ಯೋಜನೆಗಳ ಪ್ರಚಾರಕ್ಕಾಗಿ ರೂ 408.46 ಕೋಟಿ ವ್ಯಯಿಸಿದೆ ಎಂದು ಸಚಿವರು ಹೇಳಿದಾರೆ.
ಆರ್ಥಿಕ ವರ್ಷ 2018-19ರಲ್ಲಿ ರೂ 1,179.17 ಕೋಟಿ ಹಾಗೂ 2019-20 ರಲ್ಲಿ ರೂ 708.18 ಕೋಟಿ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಸಚಿವರು ತಿಳಿಸಿದರು.
2020-21ರಲ್ಲಿ ಸರ್ಕಾರ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ರೂ 409.47 ಕೋಟಿ ಖರ್ಚು ಮಾಡಿದ್ದರೆ 2021-22ರಲ್ಲಿ ಮಾಡಿದ ಖರ್ಚು ರೂ 315.98 ಕೋಟಿ ಆಗಿದೆ ಎಂದು ಅವರು ಮಾಹಿತಿ ನೀಡಿದರು. 2023-24ರಲ್ಲಿ ಜುಲೈ 13ರ ತನಕ ಪ್ರಚಾರಕ್ಕಾಗಿ ಮಾಡಿದ ಖರ್ಚು ರೂ. 43.16 ಕೋಟಿ ಎಂದು ಸಚಿವರು ತಿಳಿಸಿದ್ದಾರೆ.





