ಡಾಲರ್ ಎದುರು 88.19ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಆ.29: ಅಮೆರಿಕದ ಡಾಲರ್ನೆದುರು ಭಾರತೀಯ ರೂಪಾಯಿ ಶುಕ್ರವಾರ ಶೇ.0.65ರಷ್ಟು ಇಳಿದು 88.19ರ ಸಾರ್ವಕಾಲಿಕ ಮಟ್ಟಕ್ಕೆ ಕುಸಿದಿದೆ. ಇದು ಸುಮಾರು ಮೂರು ತಿಂಗಳುಗಳ ಅವಧಿಯಲ್ಲಿ ರೂಪಾಯಿ ಒಂದು ದಿನದಲ್ಲಿ ಅನುಭವಿಸಿದ ಅತ್ಯಂತ ಹೆಚ್ಚಿನ ನಷ್ಟವಾಗಿದ್ದು,ಮೊದಲ ಬಾರಿಗೆ 88ರ ಗಡಿಯನ್ನು ದಾಟಿದೆ.
ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.50ರಷ್ಟು ಸುಂಕವನ್ನು ವಿಧಿಸಿರುವ ಕುರಿತು ಸೃಷ್ಟಿಯಾಗಿರುವ ಕಳವಳಗಳ ನಡುವೆ ರೂಪಾಯಿ ಮೌಲ್ಯ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕುಸಿದಿದೆ.
ಫೆಬ್ರವರಿಯಲ್ಲಿ ರೂಪಾಯಿ 87.95ಕ್ಕೆ ಕುಸಿದು ಡಾಲರ್ ನೆದುರು ತನ್ನ ಹಿಂದಿನ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ದಾಖಲಿಸಿತ್ತು.
ರೂಪಾಯಿ ಈ ವರ್ಷ ಏಶ್ಯಾದಲ್ಲೇ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಿರುವ ಕರೆನ್ಸಿಯಾಗಿದೆ ಎಂದು ಬ್ಲೂಮ್ಬರ್ಗ್ ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.
Next Story





