ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ಸಾಂದರ್ಭಿಕ ಚಿತ್ರ | Photo Credit : freepik
ಮುಂಬೈ,ಜ.23: ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿಯುತ್ತಾ ಬರುತ್ತಿದ್ದು, ಶುಕ್ರವಾರ 91.99 ರೂ.ಗೆ ಇಳಿದಿದ್ದು, ಸಾರ್ವಕಾಲಿಕವಾಗಿ ಅತ್ಯಧಿಕ ಕುಸಿತವನ್ನು ಕಂಡಿದೆ. ದಿನದ ವಹಿವಾಟಿನ ಅಂತ್ಯದ ವೇಳೆಗೆ 91.88 ರೂ.ಗೆ ಸ್ಥಿರಗೊಂಡಿದೆ.
ವಿದೇಶಿ ಹೂಡಿಕೆದಾರರು ಅತ್ಯಧಿಕ ಪ್ರಮಾಣದಲ್ಲಿ ಶೇರುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಏರ್ಪಡುವ ಕುರಿತ ಅನಿಶ್ಚಿತತೆಯು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೆನ್ನಲಾಗಿದೆ.
ಗುರುವಾರದಂದು ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು 7 ಪೈಸೆಯಷ್ಟು ಕುಸಿತವನ್ನು ಕಂಡಿದ್ದು, 91.58 ರೂ. ಆಗಿತ್ತು.
ಜನವರಿ 21ರಂದು ರೂಪಾಯಿ ಮೌಲ್ಯವು 91.65 ಆಗಿದ್ದು, ಇದು ಈವರೆಗಿನ ಸಾರ್ವಕಾಲಿಕ ಗರಿಷ್ಠ ಕುಸಿತವಾಗಿತ್ತು.
Next Story





