ತನ್ನ ಫೋಟೊ ಟಿವಿಗಳಲ್ಲಿ ಪ್ರದರ್ಶನಗೊಂಡ ನಂತರ ಗಾಬರಿಗೊಳಗಾಗಿದ್ದ ಸೈಫ್ ಮೇಲಿನ ದಾಳಿಕೋರ ತನ್ನ ತವರು ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯೋಜಿಸಿದ್ದ: ಪೊಲೀಸ್

PC : PTI
ಮುಂಬೈ: ಟಿವಿಗಳಲ್ಲಿ ತನ್ನ ಫೋಟೊ ಪ್ರದರ್ಶನಗೊಂಡ ನಂತರ ಗಾಬರಿಗೊಳಗಾಗಿದ್ದ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ್ದ ಬಾಂಗ್ಲಾ ಪ್ರಜೆ, ತನ್ನ ತವರು ದೇಶವಾದ ಬಾಂಗ್ಲಾದೇಶಕ್ಕೆ ಪರಾರಿಯಾಗಲು ಯೋಜಿಸಿದ್ದ ಎಂದು ಸೋಮವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ವ್ಯಾಪಕ ಶೋಧ ನಡೆಸಿದ ನಂತರ ರವಿವಾರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರೋಪಿ ಶರೀಫುಲ್ ಇಸ್ಲಾಂ ಶೆಹಝಾದ್ ಮುಹಮ್ಮದ್ ರೊಹಿಲ್ಲಾ ಅಮೀನ್ ಫಕೀರ್ ಎಂಬಾತ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಿಸಿಕೊಂಡಿದ್ದ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆತ ಮೋಟಾರ್ ಬೈಕ್ ಒಂದರ ಮೇಲೆ ದಾಳಿ ನಡೆಸುವುದಕ್ಕೂ ಒಂದು ವಾರ ಮುನ್ನ ಮೋಟಾರ್ ಬೈಕ್ ನಲ್ಲಿ ಹೋಗುತ್ತಿರುವುದು ಸೆರೆಯಾಗಿತ್ತು.
ಗುರುವಾರ ಬಾಂದ್ರಾದಲ್ಲಿನ ಸೈಫ್ ಅಲಿ ಖಾನ್ ರ ಐಷಾರಾಮಿ ಅಪಾರ್ಟ್ ಮೆಂಟ್ ಗೆ ನುಸುಳಿದ್ದ ಶರೀಫುಲ್, ಅವರಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದ. ಇದರಿಂದ ಸೈಫ್ ಅಲಿ ಖಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂದಿತ್ತು.
Next Story