ಮಹಾರಾಷ್ಟ್ರದಲ್ಲೂ ಮತಗಳ್ಳತನ ನಡೆದಿದೆ, ಮುಂದೆ ಬಿಹಾರದಲ್ಲಿ: ಸಂಜಯ್ ರಾವುತ್

ಸಂಜಯ್ ರಾವುತ್ | PC : PTI
ಮುಂಬೈ, ಆ. 2: ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಾಗಿ ಭಾರತೀಯ ಚುನಾವಣಾ ಆಯೋಗವು ಬೃಹತ್ ಪ್ರಮಾಣದಲ್ಲಿ ‘‘ಮತಗಳ್ಳತನ’’ದಲ್ಲಿ ತೊಡಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಆರೋಪಗಳನ್ನು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದ ಸಂಜಯ್ ರಾವುತ್ ಶನಿವಾರ ಸಮರ್ಥಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ರ ನಾಯಕತ್ವದಲ್ಲಿ ಮತಗಳನ್ನು ಕದಿಯಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
‘‘ಈ ರೀತಿಯ ಮತಗಳ್ಳತನವನ್ನು ನಾವು ಮಹಾರಾಷ್ಟ್ರದಲ್ಲಿ ನೋಡಿದ್ದೇವೆ. ಈ ವಿಷಯದಲ್ಲಿ ನಮಗೆ ಅಗಾಧ ಅನುಭವವಿದೆ. ದೇವೇಂದ್ರ ಫಡ್ನವೀಸ್ ಸರಕಾರ ಮತಗಳನ್ನು ಕದಿಯಿತು ಮತ್ತು ಅಧಿಕಾರಕ್ಕೆ ಬಂತು’’ ಎಂದು ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
‘‘ಇದು ಹರ್ಯಾಣದಲ್ಲೂ ನಡೆದಿದೆ. ಈಗ ಅದನ್ನೇ ಬಿಹಾರದಲ್ಲೂ ಮಾಡಲು ಯೋಜನೆ ರೂಪಿಸಿದ್ದಾರೆ. ಅದನ್ನು ರಾಹುಲ್ ಗಾಂಧಿ ವಿರೋಧಿಸುತ್ತಿದ್ದಾರೆ. ನಾವು ಅವರೊಂದಿಗೆ ನಿಂತಿದ್ದೇವೆ’’ ಎಂದು ರಾವುತ್ ಹೇಳಿದರು.
Next Story





