ಕೇಂದ್ರದ ಸಹಾಯಕ ಸಚಿವ ಸಂಜಯ್ ಸೇಠ್ಗೆ ಜೀವ ಬೆದರಿಕೆ; ಆರೋಪಿಯ ಬಂಧನ

ಸಂಜಯ್ ಸೇಠ್ | PC : PTI
ರಾಂಚಿ, ಜು. 28: ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಹಾಗೂ ಬಿಜೆಪಿ ಸಂಸದ ಸಂಜಯ್ ಸೇಠ್ ಅವರನ್ನು ಹತ್ಯೆಗೈಯುವುದಾಗಿ ಬೆದರಿಕೆ ಒಡ್ಡಿದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಆರೋಪಿಯನ್ನು ನಿತ್ಯಾನಂದ ಪಾಲ್ ಎಂದು ಗುರುತಿಸಲಾಗಿದೆ. ಈತನನ್ನು ಜಾರ್ಖಂಡ್ನ ಧನ್ಬಾದ್ನ ಹಿರಾಪುರದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿತ್ಯಾನಂದ ಪಾಲ್ನ ಬಂಧನವನ್ನು ಜಾರ್ಖಂಡ್ ಪೊಲೀಸ್ನ ಕೇಂದ್ರ ಕಚೇರಿ ದೃಢಪಡಿಸಿದೆ. ಡಿಐಜಿ ಹಾಗೂ ರಾಂಚಿ ಎಸ್ಎಸ್ಪಿ ಚಂದನ್ ಕುಮಾರ್ ಸಿನ್ಹಾ ಅವರ ಸೂಚನೆಯ ಆಧಾರದಲ್ಲಿ ರೂಪಿಸಲಾದ ತಂಡ ಜುಲೈ 27ರಂದು ಆತನನ್ನು ಬಂಧಿಸಿತು ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ ಪೊಲೀಸ್ನ ತಾಂತ್ರಿಕ ತಂಡದ ನೆರವಿನಿಂದ ಪತ್ತೆಯಾದ ಸಾಕ್ಷ್ಯಗಳ ಆಧಾರದಲ್ಲಿ ಪಾಲ್ನನ್ನು ಬಂಧಿಸಲಾಗಿದೆ. ಅನಂತರ ಆತನನ್ನು ರಾಂಚಿಗೆ ಕರೆದೊಯ್ಯಲಾಯಿತು ಎಂದು ಅವರು ತಿಳಿಸಿದ್ದಾರೆ.
Next Story





