ರಾಜಸ್ಥಾನದ ಬಳಿಕ ಮಧ್ಯಪ್ರದೇಶದಲ್ಲೂ ಕೆಮ್ಮಿನ ಸಿರಪ್ ಸೇವಿಸಿದ 6 ಮಕ್ಕಳು ಮೃತ್ಯು

ಸಾಂದರ್ಭಿಕ ಚಿತ್ರ | Credit : freepik.com
ಭೋಪಾಲ್: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಆರು ಮಕ್ಕಳು ಶಂಕಿತ ಮೂತ್ರಪಿಂಡದ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮೊದಲ ಪ್ರಕರಣ ಆಗಸ್ಟ್ 24 ರಂದು ದಾಖಲಾಗಿದ್ದು, ಸೆಪ್ಟೆಂಬರ್ 7 ರಂದು ಮೊದಲ ಸಾವು ಸಂಭವಿಸಿದೆ. ತೀವ್ರ ಜ್ವರ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಪ್ರಮುಖ ಲಕ್ಷಣಗಳಾಗಿದ್ದವು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸಿರಪ್ಗಳ ಬಳಕೆಯನ್ನು ತಕ್ಷಣ ನಿಷೇಧಿಸಿದೆ.
ವೈದ್ಯಕೀಯ ತಜ್ಞರು ಓವರ್-ದಿ-ಕೌಂಟರ್ ಕೆಮ್ಮಿನ ಸಿರಪ್ಗಳನ್ನು ಮಕ್ಕಳಿಗೆ ನೀಡುವುದು ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ. “ನಾಲ್ಕು-ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವೈದ್ಯರ ಸಲಹೆ ಇಲ್ಲದೆ ಯಾವುದೇ ಸಿರಪ್ ನೀಡಬಾರದು. ಈ ಔಷಧಿಗಳು ಬಹುತೇಕ ವಯಸ್ಕರ ಬಳಕೆಗೆ ಮಾತ್ರ ಸೂಕ್ತವಾಗಿರುತ್ತವೆ” ಎಂದು ಜೈಪುರ ಮೂಲದ ಶ್ವಾಸಕೋಶ ತಜ್ಞರು ಹೇಳಿದ್ದಾರೆ.





