ಹರ್ಯಾಣ : ಹಿರಿಯ ಐಪಿಎಸ್ ಅಧಿಕಾರಿ ಗುಂಡಿಕ್ಕಿಕೊಂಡು ಆತ್ಮಹತ್ಯೆ

ಪೂರಣ್ ಕುಮಾರ್ | Photo Credit : NDTV
ಹೊಸದಿಲ್ಲಿ,ಅ.7: ಹರ್ಯಾಣದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಮಂಗಳವಾರ ಚಂಡೀಗಢದಲ್ಲಿರುವ ತನ್ನ ನಿವಾಸದಲ್ಲಿ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿ.ಪೂರಣ್ ಕುಮಾರ್ ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ. ಅವರ ಆತ್ಮಹತ್ಯೆಗೆ ಖಚಿತ ಕಾರಣ ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 1:30ರ ಆಸುಪಾಸಿನಲ್ಲಿ ಈ ಘಟನೆ ನಡೆದಿದ್ದು, ಅಪರಾಧ ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳದ ಪರಿಶೀಲನೆ ನಡೆಸುತ್ತಿದೆಯೆಂದು ಚಂಡೀಗಢದ ಹಿರಿಯ ಪೊಲೀಸ್ ಆಧೀಕ್ಷಕಿ ಕನ್ವರ್ದೀಪ್ ಕೌರ್ ತಿಳಿಸಿದ್ದಾರೆ.
2001ರ ಸಾಲಿನ ಐಪಿಎಸ್ ಬ್ಯಾಚ್ನ ಅಧಿಕಾರಿಯಾದ ಪೂರಣ್ ಕುಮಾರ್ ಅವರು ಸೆಪ್ಟೆಂಬರ್ 29ರಂದು ರೋಹ್ಟಕ್ನ ಸುನಾರಿಯಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಿಯೋಜಿತರಾಗಿದ್ದಾರೆ.
ಮೃತ ಪೂರಣ್ ಕುಮಾರ್ ಅವರ ಪತ್ನಿ ಅಮನ್ ಅವರು ಐಎಎಸ್ ಅಧಿಕಾರಿಯಾಗಿದ್ದು, ಪ್ರಸಕ್ತ ಅಧಿಕೃತ ಪ್ರವಾಸದ ನಿಮಿತ್ತ ಜಪಾನ್ಗೆ ತೆರಳಿದ್ದಾರೆ.
Next Story





