ರಾಜಸ್ಥಾನ ಮುಖ್ಯಮಂತ್ರಿ ಗಾದಿಗಾಗಿ ಪೈಪೋಟಿಯಲ್ಲಿ ಏಳು ಬಿಜೆಪಿ ನಾಯಕರು
ಹೊಸದಿಲ್ಲಿ: ರಾಜಸ್ಥಾನದಲ್ಲಿ ಜಯಭೇರಿಯನ್ನು ಬಾರಿಸಿರುವ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಈವರೆಗೆ ಘೋಷಿಸಿಲ್ಲ. ಪಕ್ಷದ ರಾಷ್ಟ್ರೀಯ ನಾಯಕತ್ವವು ಶೀಘ್ರವೇ ಮುಖ್ಯಮಂತ್ರಿಯನ್ನು ಘೋಷಿಸುವ ನಿರೀಕ್ಷೆಯಿದೆ.
ಮುಖ್ಯಮಂತ್ರಿ ಗಾದಿಗೇರಲು ಏಳು ಬಿಜೆಪಿ ನಾಯಕರು ಕಣದಲ್ಲಿದ್ದಾರೆ.
*ವಸುಂಧರಾ ರಾಜೇ: 70ರ ಹರೆಯದ ರಾಜೇ ರಾಜಸ್ಥಾನದಾದ್ಯಂತ ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ರಾಜ್ಯದಲ್ಲಿ ಎರಡು ಬೃಹತ್ ಗೆಲುವುಗಳತ್ತ ಬಿಜೆಪಿಯನ್ನು ಮುನ್ನಡೆಸಿದ್ದಾರೆ.
*ಗಜೇಂದ್ರ ಸಿಂಗ್ ಶೇಖಾವತ್: ಕೇಂದ್ರ ಸಚಿವ ಶೇಖಾವತ್ ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಮುಖವಾಗಿದ್ದು, ಪಕ್ಷದಲ್ಲಿಯ ಎಲ್ಲ ಭಿನ್ನರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದರು.
*ದಿಯಾ ಕುಮಾರಿ: ಅಂದಿನ ಜೈಪುರ ಅರಸು ಮನೆತನಕ್ಕೆ ಸೇರಿದ ದಿಯಾ ಕುಮಾರಿ 2013ರಲ್ಲಿ ಬಿಜೆಪಿಗೆ ಸೇರಿದ ಬಳಿಕ ಮೂರು ಚುನಾವಣೆಗಳಲ್ಲಿ ಗೆದ್ದಿದ್ದಾರೆ. ಹಾಲಿ ಬಿಜೆಪಿ ಸಂಸದೆಯಾಗಿದ್ದಾರೆ.
*ಬಾಬಾ ಬಾಲಕನಾಥ: ರಾಜಸ್ಥಾನದಲ್ಲಿ ಬಿಜೆಪಿಯ ಗೆಲುವು ಇನ್ನೋರ್ವ ‘ಯೋಗಿ’ಯ ಉದಯಕ್ಕೆ ಕಾರಣವಾಗಬಹುದು. ಆಧ್ಯಾತ್ಮಿಕ ನಾಯಕ ಮತ್ತು ಆಲ್ವಾರ್ ಸಂಸದ ಬಾಬಾ ಬಾಲಕನಾಥರನ್ನು ರಾಜಸ್ಥಾನದ ಯೋಗಿ ಎಂದೇ ಬಣ್ಣಿಸಲಾಗುತ್ತಿದೆ.
*ಅರ್ಜುನ ರಾಮ ಮೇಘ್ವಾಲ್: ಪ್ರಸ್ತುತ ಕೇಂದ್ರ ಕಾನೂನು ಸಚಿವರಾಗಿರುವ ಮೇಘ್ವಾಲ್ ಸರಕಾರಕ್ಕಾಗಿ ಸಂಸತ್ತಿನ ಉಭಯ ಸದನಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
*ಕಿರೋಡಿಲಾಲ್ ಮೀನಾ: ಮೀನಾ ಸಮುದಾಯವನ್ನು ಗೆಲ್ಲುವ ಹೊಣೆಯನ್ನು ಹೊತ್ತಿದ್ದ ಕಿರೋಡಿಲಾಲ್ ಪೂರ್ವ ರಾಜಸ್ಥಾನದಲ್ಲಿ ಅದನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ.
*ಸಿ.ಪಿ.ಜೋಶಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜೋಶಿ ಕೂಡ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದಾರೆ.