ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಶಾಂತಿನಿಕೇತನ

Photo: X \ @UNESCO
ಹೊಸದಿಲ್ಲಿ : ಶತಮಾನಗಳ ಹಿಂದೆ ಕವಿ ರವೀಂದ್ರನಾಥ್ ಠಾಗೋರ್ ವಿಶ್ವ ಭಾರತಿ ವಿಶ್ವವಿದ್ಯಾನಿಲಯ ನಿರ್ಮಿಸಿದ ಪಶ್ಚಿಮಬಂಗಾಳದ ಜನಪ್ರಿಯ ಸ್ಥಳ ಶಾಂತಿನಿಕೇತನ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಲಿದೆ.
ಶಾಂತಿನಿಕೇತನ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಲಿದೆ ಎಂದು ಯುನೆಸ್ಕೊ ರವಿವಾರ ‘ಎಕ್ಸ್’ (ಈ ಹಿಂದಿನ ಟ್ವಿಟರ್)ನಲ್ಲಿ ಘೋಷಿಸಿದೆ.
ಬಿರ್ಭೂಮ್ ಜಿಲ್ಲೆಯಲ್ಲಿರುವ ಈ ಸಾಂಸ್ಕೃತಿಕ ಕೇಂದ್ರಕ್ಕೆ ಯೊನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಭಾರತ ದೀರ್ಘ ಕಾಲದಿಂದ ಶ್ರಮಿಸುತ್ತಿತ್ತು.
ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಶಾಂತಿನಿಕೇತನವನ್ನು ಸೇರಿಸುವಂತೆ ಕೆಲವು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಸಲಹಾ ಸಮಿತಿ ಐಸಿಒಎಂಒಎಸ್ ಶಿಫಾರಸು ಮಾಡಿತ್ತು.
BREAKING!
— UNESCO ️ #Education #Sciences #Culture (@UNESCO) September 17, 2023
New inscription on the @UNESCO #WorldHeritage List: Santiniketan, #India . Congratulations!
➡️ https://t.co/69Xvi4BtYv #45WHC pic.twitter.com/6RAVmNGXXq







