ಭೂಕಂಪದ ಸಂದರ್ಭ ತುರ್ಕಿಯಾಗೆ ಕೇರಳ ನೆರವು ನೀಡಿದ್ದಕ್ಕೆ ತರೂರ್ ಟೀಕೆ

Shashi Tharoor | PTI
ಹೊಸದಿಲ್ಲಿ: ತುರ್ಕಿಯಾದಲ್ಲಿ 2023ರಲ್ಲಿ ಸಂಭವಿಸಿದ್ದ ಭೀಕರ ಭೂಕಂಪದ ಸಂದರ್ಭ ಕೇರಳ ಸರಕಾರ ಟರ್ಕಿಗೆ ನೆರವು ನೀಡಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.
ತುರ್ಕಿಯಾಗೆ ಕೇರಳ 10 ಕೋಟಿ ರೂ. ನೆರವು ನೀಡಿದೆ ಎಂಬ ವರದಿಯನ್ನು ಉಲ್ಲೇಖಿಸಿದ ತರೂರ್, ಎರಡು ವರ್ಷದ ಬಳಿಕ ಟರ್ಕಿಯ ವರ್ತನೆ ಗಮನಿಸಿದರೆ, ತಾನು ಮಾಡಿದ ತಪ್ಪು ದಾನದ ಬಗ್ಗೆ ಕೇರಳದ ಎಡರಂಗ ಸರಕಾರ ಈಗ ಯೋಚಿಸುವ ಕಾಲ ಬಂದಿದೆ . ಈ 10 ಕೋಟಿ ರೂಪಾಯಿಯನ್ನು ಒಳ್ಳೆಯ ಕಾರ್ಯಕ್ಕೆ ಬಳಸಬಹುದಿತ್ತು ಎಂದು ವಯನಾಡ್ನ ಜನತೆ ಭಾವಿಸುತ್ತಿದ್ದಾರೆ ಎಂದರು.
ಪಹಲ್ಗಾಮ್ ಭಯೋತ್ಪಾದಕರ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಸಂದರ್ಭದಲ್ಲಿ ತುರ್ಕಿಯಾ ಪಾಕಿಸ್ತಾನದ ಪರ ವಹಿಸಿತ್ತು.
ತರೂರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಪಿಎಂನ ಜಾನ್ ಬ್ರಿಟ್ಟಾಸ್ `ಶಶಿ ತರೂರ್ ಬಗ್ಗೆ ನಮಗೆ ಗೌರವವಿದೆ. ಆದರೆ ಈ ಹೇಳಿಕೆ ಆಯ್ದು ಭಾಗವಾಗಿದೆ. ಭೂಕಂಪದ ಸಂದರ್ಭ ಕೇಂದ್ರ ಸರಕಾರವೂ ಟರ್ಕಿಗೆ ನೆರವಿನ ಹಸ್ತ ಚಾಚಿದ್ದನ್ನು ಅವರಿಗೆ ನೆನಪಿಸಲು ಬಯಸುತ್ತೇನೆ'





