RBI ಉಪ ಗವರ್ನರ್ ಆಗಿ ಶಿರಿಶ್ ಚಂದ್ರ ಮುರ್ಮು ನೇಮಕ

ಶಿರಿಶ್ ಚಂದ್ರ ಮುರ್ಮು (Photo source: RBI)
ಅಕ್ಟೋಬರ್ 9ರಂದು ಅಧಿಕಾರ ಸ್ವೀಕಾರ
ಹೊಸದಿಲ್ಲಿ: ಅಕ್ಟೋಬರ್ 9ರಿಂದ ಅನ್ವಯವಾಗುವಂತೆ ಶಿರಿಶ್ ಚಂದ್ರ ಮುರ್ಮು ಅವರನ್ನು RBI ಉಪ ಗವರ್ನರ್ ಆಗಿ ನೇಮಕಗೊಂಡಿದ್ದು, ಅವರ ಅಧಿಕಾರಾವಧಿ ಮೂರು ವರ್ಷಗಳ ಕಾಲ ಇರಲಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹಾಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯಕಾರಿ ನಿರ್ದೇಶಕರಾಗಿರುವ ಶಿರಿಶ್ ಚಂದ್ರ ಮುರ್ಮು, ಅಕ್ಟೋಬರ್ 8ರಂದು ಅಧಿಕಾರಾವಧಿ ಕೊನೆಯಾಗಲಿರುವ ರಾಜೇಶ್ವರ್ ರಾವ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜೇಶ್ವರ್ ರಾವ್ ಅವರು ಬ್ಯಾಂಕಿನ ಬ್ಯಾಂಕಿಂಗ್ ನಿಯಮಗಳು ಹಾಗೂ ಇನ್ನಿತರ ಹುದ್ದೆಗಳ ಮೇಲ್ವಿಚಾರಕರಾಗಿದ್ದರು.
ಭಾರತೀಯ ರಿಸರ್ವ್ ಬ್ಯಾಂಕ್ ಗೆ ನಾಲ್ಕು ಮಂದಿ ಉಪ ಗವರ್ನರ್ ಗಳಿದ್ದು, ಹಣಕಾಸು ನೀತಿ, ಬ್ಯಾಂಕಿಂಗ್ ಮೇಲ್ವಿಚಾರಣೆ, ಹಣಕಾಸು ಮಾರುಕಟ್ಟೆಗಳ ನಿಯಂತ್ರಣ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಗಳ ಜವಾಬ್ದಾರಿ ನಿರ್ವಹಿಸುತ್ತಾರೆ.
Next Story





