ಯಾರ ಮುಂದೆಯೂ ತಲೆಬಾಗದೆ ಇರುವುದನ್ನು ಇರಾನ್ನಿಂದ ಕಲಿಯಬೇಕು: ಸಂಜಯ್ ರಾವತ್
"ಇರಾನ್ ಯಾವಾಗಲೂ ಭಾರತದ ಪರವಾಗಿ ನಿಂತಿರುವ ದೇಶ"

ಸಂಜಯ್ ರಾವತ್ (Photo: PTI)
ಮುಂಬೈ: ಸ್ವಾಭಿಮಾನ ಮತ್ತು ಧೈರ್ಯ ಏನು ಎಂಬುದನ್ನು ಇರಾನ್ ದೇಶ ತೋರಿಸಿದೆ. ಭಾರತ ಅದರಿಂದ ಕಲಿಯಬೇಕು. ಯಾರ ಮುಂದೆಯೂ ತಲೆಬಾಗದೆ ಇರುವುದನ್ನು ಇರಾನ್ನಿಂದ ಕಲಿಯಬೇಕು ಎಂದು ಶಿವಸೇನಾ ಉದ್ಧವ್ ಬಣದ ಸಂಸದ ಸಂಜಯ್ ರಾವತ್ ಮಂಗಳವಾರ ಇರಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇರಾನ್ನ ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಸೋಮವಾರ ಖತರ್ನಲ್ಲಿನ ಅಮೆರಿಕದ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿತ್ತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ರಾವತ್, ʼಒಂದು ರಾಷ್ಟ್ರದ ಸ್ವಾಭಿಮಾನ ಮತ್ತು ಧೈರ್ಯ ಏನೆಂದು ಇರಾನ್ ತೋರಿಸಿದೆ. ನಾವು ಯಾವುದೇ ತೊಂದರೆಯನ್ನು ಎದುರಿಸಿದಾಗ ಇರಾನ್ ಯಾವಾಗಲೂ ಭಾರತದ ಪರವಾಗಿ ನಿಂತಿರುವ ದೇಶ. ಅದು ಕಾಶ್ಮೀರ ಅಥವಾ ಪಾಕಿಸ್ತಾನದ ಸಮಸ್ಯೆಯಾಗಲಿ. ಇರಾನ್ ಭಾರತದ ಪರವಾಗಿ ನಿಂತಿದೆ. ನಾವು ಇರಾನ್ನಿಂದ ಕಲಿಯಬೇಕು. ದೇಶವು ಯಾರ ಮುಂದೆಯೂ ತಲೆಬಾಗಿಲ್ಲʼ ಎಂದು ಹೇಳಿದ್ದಾರೆ.
Next Story





