ಸಿಕ್ಕಿಂ ನೆರೆ: 2,000 ಸಂತ್ರಸ್ತರ ತೆರವು

Photo: IAF
ಕೋಲ್ಕತಾ: ಸಿಕ್ಕಿಂ ನೆರೆ ಪೀಡಿತ ಪ್ರದೇಶಗಳಿಂದ 2,000ಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಿರುವ ಭಾರತೀಯ ವಾಯು ಪಡೆ ಹಾಗೂ ಭೂಸೇನೆ ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿವೆ.
ನೆರೆ ಪೀಡಿತ ಪ್ರದೇಶಗಳಿಂದ 1,700 ಜನರನ್ನು ಸ್ಥಳಾಂತರಗೊಳಿಸಲು ಭಾರತೀಯ ವಾಯು ಪಡೆ ಚಿನೂಕ್ ಹಾಗೂ ಎಂಐ-17 ವಿ5 ಹೆಲಿಕಾಪ್ಟರ್ ಗಳನ್ನು ಬಳಸಿತು.
ಉತ್ತರ ಸಿಕ್ಕಿಂನ ರಾಬೋಮ್ ಗ್ರಾಮದಲ್ಲಿ ಸಿಲುಕಿದ್ದ 245 ಜನರನ್ನು ಭೂ ಸೇನೆ ದಟ್ಟ ಅರಣ್ಯ ಹಾಗೂ ಬೆಟ್ಟ ಶ್ರೇಣಿಗಳ ಮೂಲಕ ಸಾಗಿ ತೆರವುಗೊಳಿಸಿತು.
ಕುಂಡನ್ ಜಲವಿದ್ಯುತ್ ಯೋಜನೆ ಸ್ಥಳದಲ್ಲಿದ್ದ 97 ಕಾರ್ಮಿಕರು ಹಾಗೂ ಪ್ರವಾಹದ ಬಳಿಕ ಸಿಲುಕಿದ್ದ 80ರಿಂದ 100 ಸ್ಥಳೀಯರನ್ನು ಕೂಡ ಭೂ ಸೇನೆ ಸಿಬ್ಬಂದಿ ತೆರವುಗೊಳಿಸಿದರು.
ಲೋನಾಕ್ ಸರೋವರದ ಮೇಲೆ ಅಕ್ಟೋಬರ್ 4ರಂದು ಸಂಭವಿಸಿದ ಮೇಘ ಸ್ಫೋಟದಿಂದ ತೀಸ್ತಾ ನದಿ ಜಲಾನಯನ ಪ್ರದೇಶದಲ್ಲಿ ಉಂಟಾದ ಪ್ರವಾಹದಿಂದ ಸುಮಾರು 87,300 ಜನರು ಸಂತ್ರಸ್ತರಾಗಿದ್ದಾರೆ.
Next Story





