ಎಸ್‌ಐಆರ್ 2.0 : 9 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಆರಂಭ

ಹೊಸದಿಲ್ಲಿ,ನ.4: ಚುನಾವಣಾ ಆಯೋಗವು ಮಂಗಳವಾರದಿಂದ ಒಂಭತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು(ಎಸ್‌ಐಆರ್ 2.0) ಆರಂಭಿಸಿದೆ.
ಎಸ್‌ಐಆರ್ 2.0 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ,ಛತ್ತೀಸ್‌ಗಡ,ಗೋವಾ,ಗುಜರಾತ್, ಕೇರಳ,ಮಧ್ಯಪ್ರದೇಶ,ಪುದುಚೇರಿ,ರಾಜಸ್ಥಾನ,ತಮಿಳುನಾಡು,ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳ ಸುಮಾರು 51 ಕೋಟಿ ಮತದಾರರನ್ನು ಒಳಗೊಂಡಿರಲಿದೆ. ಈ ಪೈಕಿ ತಮಿಳುನಾಡು,ಪುದುಚೇರಿ,ಕೇರಳ ಮತ್ತು ಪ.ಬಂಗಾಳಗಳಲ್ಲಿ ಮುಂದಿನ ವರ್ಷದ ಎಪ್ರಿಲ್-ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಮಂಗಳವಾರದಿಂದ ಪ್ರಾರಂಭಗೊಂಡಿರುವ ಎಣಿಕೆ ಕಾರ್ಯವು ಡಿ.4ರವರೆಗೆ ಮುಂದುವರಿಯಲಿದ್ದು,ಚುನಾವಣಾ ಆಯೋಗವು ಡಿ.9ರಂದು ಕರಡು ಮತದಾರರ ಪಟ್ಟಿಗಳನ್ನು ಬಿಡುಗಡೆಗೊಳಿಸಲಿದೆ. ಜನರು ಮುಂದಿನ ವರ್ಷದ ಜ.8ರವರೆಗೆ ಕರಡು ಪಟ್ಟಿಯ ಕುರಿತು ಆಕ್ಷೇಪಗಳು ಮತ್ತು ಹಕ್ಕು ಕೋರಿಕೆಗಳನ್ನು ಸಲ್ಲಿಸಬಹುದು.
Next Story





