ಪುಟ್ ಪಾತ್ ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ; ವಿಡಿಯೋ ವೈರಲ್
ಆರೋಪಿಯ ಬಂಧನ

Screengrab:X/@ndtv
ಹೊಸದಿಲ್ಲಿ: ಪುಟ್ ಪಾತ್ ನಲ್ಲಿ ಮಲಗಿದ್ದ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ದಿಲ್ಲಿಯ Model Townನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಆರೋಪಿಯೋರ್ವ ದ್ವಿಚಕ್ರ ವಾಹನದಿಂದ ಇಳಿದು ಫುಟ್ಪಾತ್ ನಲ್ಲಿ ಮಲಗಿದ್ದ ವ್ಯಕ್ತಿಯ ಬಳಿ ಹೋಗಿ ಆತನನ್ನು ಎಬ್ಬಿಸಿ ಆತನ ಮೇಲೆ ಮರದ ಸಲಾಕೆಯಿಂದ ಮನಬಂದಂತೆ ಥಳಿಸುವುದು ಕಂಡು ಬಂದಿದೆ.
ಹಲ್ಲೆ ಬಳಿಕ ಆರೋಪಿ ಸ್ನೇಹಿತರ ಜೊತೆ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿ ಆರ್ಯನ್ ಎಂಬಾತನನ್ನು ಬಂಧಿಸಿದ್ದಾರೆ.
ಘಟನೆ ನಡೆಯುವ ಒಂದು ದಿನದ ಮೊದಲು ಪಕ್ಕದ ಪಾರ್ಕ್ ವೊಂದರಲ್ಲಿ ಆರ್ಯನ್ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಮ್ಫಾಲ್ ಆರ್ಯನ್ ಗೆ ಅಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಸೂಚಿಸಿದ್ದಾನೆ, ಈ ವೇಳೆ ಇಬ್ಬರ ನಡುವೆ ವಾಗ್ವಾದವು ನಡೆದಿತ್ತು. ಇದೇ ವೈಮನಸ್ಸಿನಿಂದ ಮರುದಿನ ಆರ್ಯನ್ ತನ್ನ ಸ್ನೇಹಿತರ ಜೊತೆ ಬಂದು ರಾಮ್ ಫಾಲ್ ಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
Watch | On Camera, Sleeping Delhi Man Beaten For "Don't Urinate In Public" Request https://t.co/XKIRzNaliG pic.twitter.com/51xhQAqC17
— NDTV (@ndtv) October 6, 2024