ಕೆಲವೊಮ್ಮೆ ಸತ್ಯ ಹೇಳುವುದನ್ನು ತಪ್ಪಿಸಬೇಕು : ಸುಪ್ರೀಂಕೋರ್ಟ್ ಕುರಿತ ದುಬೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಸಚಿವ

ಕೈಲಾಶ್ ವಿಜಯವರ್ಗಿಯ (Photo: X/@PTI_News)
ಭೋಪಾಲ್ : ಕೆಲವೊಮ್ಮೆ ಸತ್ಯವನ್ನು ಹೇಳುವುದನ್ನು ತಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಕುರಿತ ಸಂಸದ ನಿಶಿಕಾಂತ್ ದುಬೆ ಹೇಳಿಕೆಗೆ ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗಿಯ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪಕ್ಷವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಾನು ಅವರೊಂದಿಗೆ ಇದ್ದೇನೆ. ಕೆಲವೊಮ್ಮೆ ನೀವು ಸತ್ಯವನ್ನು ಹೇಳುವುದನ್ನು ತಪ್ಪಿಸಬೇಕು. ನಿಶಿಕಾಂತ್ ದುಬೆ ನನ್ನ ಕಿರಿಯ ಸಹೋದರ ಮತ್ತು ಸಾರ್ವಜನಿಕವಾಗಿ ಅಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಿ ಎಂದು ಹೇಳಿದ್ದಾರೆ.
ʼಸುಪ್ರೀಂ ಕೋರ್ಟ್ ಕಾನೂನು ರೂಪಿಸುವುದಾದರೆ ಸಂಸತ್ ಭವನವನ್ನು ಮುಚ್ಚಬೇಕುʼ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನಿನ್ನೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಬಿಜೆಪಿ ಅಂತರವನ್ನು ಕಾಯ್ದುಕೊಂಡಿತ್ತು. ಇದು ವೈಯಕ್ತಿಕ ಹೇಳಿಕೆ, ಇದನ್ನು ಬಿಜೆಪಿ ಬಲವಾಗಿ ತಿರಸ್ಕರಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದರು.
Next Story





