ಉತ್ತರ ಪ್ರದೇಶ | ಕಾರ್ಯಕ್ರಮದಿಂದ ಪ್ರಧಾನಿ ಮೋದಿ ನಿರ್ಗಮಿಸುತ್ತಿದ್ದಂತೆ ಹೂವಿನ ಕುಂಡಗಳನ್ನು ಹೊತ್ತೊಯ್ದ ಜನರು

Screengrab: X/@Mithileshdhar
ಲಕ್ನೋ: ಗುರುವಾರ ಲಕ್ನೋದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕ ʼರಾಷ್ಟ್ರೀಯ ಪ್ರೇರಣಾ ಸ್ಥಳʼ ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಪ್ರಧಾನಿಯವರ ಭೇಟಿಗೆ ಮುಂಚಿತವಾಗಿ ನಗರದ ಅಂದವನ್ನು ಹೆಚ್ಚಿಸಲು ರಸ್ತೆಬದಿಗಳಲ್ಲಿ ಸಾಲಾಗಿ ಹೂವಿನ ಕುಂಡಗಳನ್ನು ಇರಿಸಲಾಗಿತ್ತು. ಆದರೆ ಕಾರ್ಯಕ್ರಮ ಕೊನೆಗೊಂಡ ತಕ್ಷಣ ಜನರು ಹೂವಿನ ಕುಂಡಗಳನ್ನು ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ.
ರಾಷ್ಟ್ರೀಯ ಪ್ರೇರಣಾ ಸ್ಥಳದಿಂದ ಹೂವಿನ ಕುಂಡಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮೆರದಲ್ಲಿ ಸೆರೆಯಾಗಿದೆ. ಈ ಕುರಿತ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ರಾಷ್ಟ್ರೀಯ ಪ್ರೇರಣಾ ಸ್ಥಳದ ಉದ್ಘಾಟನೆಗಾಗಿ, ಲಕ್ನೋ ಅಭಿವೃದ್ಧಿ ಪ್ರಾಧಿಕಾರ (LDA) ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಪ್ರೇರಣಾ ಸ್ಥಳ, ವಸಂತ್ ಕುಂಜ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸುತ್ತಲೂ ಹಸಿರು ಕಾರಿಡಾರ್ ನ್ನು ನಿರ್ಮಿಸಿತ್ತು. ವಿವಿಧ ಹೂವುಗಳು ಮತ್ತು ಸಸ್ಯಗಳ ಸಣ್ಣ ಕುಂಡಗಳಿಂದ ಅಲಂಕರಿಸಲ್ಪಟ್ಟ ಅಲಂಕಾರಿಕ ವಸ್ತುಗಳನ್ನು ನೇತು ಹಾಕಲಾಗಿತ್ತು. ಆದರೆ, ಪ್ರಧಾನಿ ನಿರ್ಗಮಿಸಿದ ಕೂಡಲೇ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸಡಿಲಿಸಿದ ನಂತರ, ಹಲವರು ಹೂವಿನ ಕುಂಡಗಳನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ.
ಈ ಘಟನೆಯು ನಾಗರಿಕರ ಪ್ರಜ್ಞೆಯ ಬಗ್ಗೆ ಮಾತ್ರವಲ್ಲದೆ, ಆಡಳಿತದ ಜವಾಬ್ಧಾರಿಗಳ ಬಗ್ಗೆ ಕೂಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
तहजीब और नवाबों के शहर लखनऊ में लोग ऐसा कब से करने लगे? पीएम मोदी के लौट जाने के बाद लोग बाइकों पर लादकर गमले उठा ले गये। गमला चोर बन गये। मतलब लुच्चई की हद है। pic.twitter.com/lfaHluhJt6
— Bhadohi Wallah (@Mithileshdhar) December 26, 2025







