ತಾಂತ್ರಿಕ ದೋಷ: ಪಾಟ್ನಾಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ದಿಲ್ಲಿಗೆ ವಾಪಸ್

ಸಾಂದರ್ಭಿಕ ಚಿತ್ರ
ಪಾಟ್ನಾ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಹಾರದ ರಾಜಧಾನಿ ಪಾಟ್ನಾಗೆ ಗುರುವಾರ ಬೆಳಗ್ಗೆ ತೆರಳುತ್ತಿದ್ದ ಸ್ಪೈಸ್ಜೆಟ್ನವಿಮಾನವು ದಿಲ್ಲಿಗೆ ವಾಪಸಾಗಿದೆ. , ಬೋಯಿಂಗ್ 737 ಮಾದರಿಯ ‘ಎಸ್ಜಿ 497’ ಸ್ಪೈಸ್ಜೆಟ್ ವಿಮಾನದಲ್ಲಿ ಪಯಣದ ನಡುವೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
ದಿಲ್ಲಿಗೆ ವಾಪಾಸಾದ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಪಾಟ್ನಾಗೆ ಪ್ರಯಾಣಿಸಲು ಬೇರೊಂದು ವಿಮಾನದ ಏರ್ಪಾಡು ಮಾಡಲಾಯಿತು ಎಂದು ಸ್ಪೈಸ್ಜೆಟ್ ವಾಯುಯಾನ ಸಂಸ್ಥೆಯ ಹೇಳಿಕೆ ತಿಳಿಸಿದೆ.
ಕಳೆದ ಎರಡು ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಭಾರತೀಯ ವಿಮಾನವೊಂದು ಪ್ರಯಾಣ ರದ್ದುಪಡಿಸಿ ವಾಪಾಸಾಗಿರುವುದು ಇದು ಎರಡನೇ ಸಲವಾಗಿದೆ.
ಬುಧವಾರದಂದು ಮುಂಬೈಯಿಂದ ಅಮೆರಿಕದ ನೆವಾರ್ಕ್ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ ಎಐ191 ವಿಮಾನದಲ್ಲಿ ತಾಂತ್ರಿಕ ದೋಷದ ಶಂಕೆಯುಂಟಾದ ಹಿನ್ನೆಲೆಯಲ್ಲಿ ವಿಮಾನವು ದಾರಿ ಮಧ್ಯದಿಂದಲೇ ಮುಂಬೈಗೆ ಮರಳಿತ್ತು.
ಇದರ ಪರಿಣಾಮವಾಗಿ ಎಐ 191 ಹಾಗೂ ನೆವಾರ್ಕ್ನಿಂದ ಭಾರತಕ್ಕೆ ಮರಳಿದ್ದ ಎಐ144 ವಿಮಾನಗಳ ನಿಗದಿತ ಹಾರಾಟವನ್ನು ರದ್ದುಪಡಿಸಲಾಗಿತ್ತು.





