ಐಎಎಫ್ ನಿಯಂತ್ರಣಕ್ಕೆ ಶ್ರೀನಗರ ವಿಮಾನ ನಿಲ್ದಾಣ

ಶ್ರೀನಗರ ವಿಮಾನ ನಿಲ್ದಾಣ | PC : PTI
ಶ್ರೀನಗರ: ಆಪರೇಷನ್ ಸಿಂಧೂರ್ ಬಳಿಕ ಶ್ರೀನಗರ ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಯಂತ್ರಣವನ್ನು ಭಾರತೀಯ ವಾಯು ಪಡೆ ಬುಧವಾರ ತನ್ನ ಕೈಗೆ ತೆಗೆದುಕೊಂಡಿದೆ.
ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಯಾನವನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ. ಈಗ ಶ್ರೀನಗರದಿಂದ ಎಲ್ಲಾ ವಾಯು ಪ್ರದೇಶದ ಕಾರ್ಯಾಚರಣೆಯನ್ನು ಭಾರತೀಯ ವಾಯು ಪಡೆ ನಿಯಂತ್ರಿಸುತ್ತಿದೆ. ಇದರಲ್ಲಿ ವಾಯು ಯಾನ ನಿಯಂತ್ರಣ, ಕಣ್ಗಾವಲು ಹಾಗೂ ಎಲ್ಲಾ ವಾಯು ಯಾನ ಸುರಕ್ಷಾ ವ್ಯವಸ್ಥೆ ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಇದು ಕ್ರಮ ನಾವು ಸಂಪೂರ್ಣ ಸಮರ ಸಿದ್ಧತೆಯತ್ತ ವಾಲುತ್ತಿರುವುದನ್ನು ಸಂಕೇತಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
Next Story





