1,000 ‘ಮುಖ್ಯಮಂತ್ರಿಯ ಔಷಧಾಲಯ’ಗಳಿಗೆ ಚಾಲನೆ ನೀಡಿದ ಸ್ಟಾಲಿನ್

ಎಮ್.ಕೆ. ಸ್ಟಾಲಿನ್ | PC : thehindu.com
ಚೆನ್ನೈ: ತಮಿಳುನಾಡಿನ ಜನರಿಗೆ ರಿಯಾಯಿತಿ ದರದಲ್ಲಿ ಔಷಧಗಳನ್ನು ಪೂರೈಸುವ 1,000 ‘ಮುದಲ್ವರ್ ಮರುಂದಗಮ್’ (ಮುಖ್ಯಮಂತ್ರಿಯ ಔಷಧಾಲಯ)ಗಳಿಗೆ ರಾಜ್ಯದ ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಸೋಮವಾರ ಚಾಲನೆ ನೀಡಿದರು.
ಈ ಯೋಜನೆಯಡಿ, 75 ಶೇಕಡವರೆಗಿನ ರಿಯಾಯಿತಿಯಲ್ಲಿ ಔಷಧಿಗಳನ್ನು ಖರೀದಿಸಬಹುದಾಗಿದೆ.
ಇಂಥ ಇನ್ನೂ ಹೆಚ್ಚಿನ ಔಷಧಾಲಯಗಳನ್ನು ತೆರೆಯಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ಇದು ಅರ್ಹ ಫಾರ್ಮಾಸಿಸ್ಟ್ಗಳಿಗೂ ಉದ್ಯೋಗಾವಕಾಶ ಕಲ್ಪಿಸುತ್ತದೆ ಎಂದರು.
ಇಂಥ 500 ಔಷಧಾಲಯಗಳನ್ನು ಸಹಕಾರ ಸಂಘಗಳು ನಡೆಸಿದರೆ, ಉಳಿದ 500 ಔಷಧಾಲಯಗಳನ್ನು ಅರ್ಹ ಫಾರ್ಮಾಸಿಸ್ಟ್ಗಳೂ ಆಗಿರುವ ಉದ್ಯಮಿಗಳಿಗೆ ನೀಡಲಾಗುವುದು. ಈ 1,000 ಔಷಧಾಲಯಗಳು ಸಹಕಾರ ಇಲಾಖೆಯು ಸ್ಥಾಪಿಸುತ್ತಿರುವ ಮೊದಲ ಹಂತದ ಔಷಧಾಲಯಗಳಾಗಿವೆ.
ಜನರ ಮೇಲಿನ ಹೊರೆಯನ್ನು ತಗ್ಗಿಸುವ ಪ್ರಯತ್ನವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಸ್ಟಾಲಿನ್ ನುಡಿದರು.
Next Story





