ಮಹಾರಾಷ್ಟ್ರ | ಬಾಗೇಶ್ವರ್ ಧಾಮ್ ಬಾಬಾ ಸತ್ಸಂಗದ ವೇಳೆ ನೂಕುನುಗ್ಗಲು : ವೀಡಿಯೊ ವೈರಲ್

Photo | ANI
ಥಾಣೆ: ಮಹಾರಾಷ್ಟ್ರದ ಥಾಣೆಯ ಮಂಕೋಲಿ ನಾಕಾದಲ್ಲಿ ಬಾಗೇಶ್ವರ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಸತ್ಸಂಗದ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ಕುರಿತು ವೀಡಿಯೊ ವೈರಲ್ ಆಗಿದೆ.
ಸುದ್ದಿ ಸಂಸ್ಥೆ ಎಎನ್ಐ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಬಾಗೇಶ್ವರ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಸತ್ಸಂಗದ ವೇಳೆ ನೆರೆದಿದ್ದ ಸಾವಿರಾರು ಭಕ್ತರು ನೂಕಾಟ ತಳ್ಳಾಟ ನಡೆಸಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಇದ್ದ ವೇದಿಕೆಯತ್ತ ಜನ ಸಂದಣಿ ತೆರಳಿದ್ದು, ಈ ವೇಳೆ ವೇದಿಕೆಯ ಸುತ್ತ ನಿಂತಿದ್ದ ಭದ್ರತಾ ಸಿಬ್ಬಂದಿ ಜನರನ್ನು ವೇದಿಕೆಯಿಂದ ದೂರಕ್ಕೆ ತಳ್ಳಿದ್ದಾರೆ. ಈ ವೇಳೆ ನೂಕಾಟ-ತಳ್ಳಾಟ ನಡೆದಿದೆ. ಜನಸಂದಣಿಯನ್ನು ಕಂಡು ಧೀರೇಂದ್ರ ಶಾಸ್ತ್ರಿ ವೇದಿಕೆಯಿಂದ ನಿರ್ಗಮಿಸಿದ್ದಾರೆ. ಪೊಲೀಸರು ಮತ್ತು ಕಾರ್ಯಕ್ರಮದ ಆಯೋಜಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ.
#WATCH | Thane, Maharashtra: A stampede-like situation occurred during the event of Bageshwar Dham chief Dhirendra Krishna Shastri in Mankoli Naka. More details awaited. pic.twitter.com/nJYTyrbCBd
— ANI (@ANI) January 4, 2025