ವೀಸಾ ಶರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ; ಭಾರತೀಯರಿಗೆ ಅಮೆರಿಕ ರಾಯಭಾರ ಕಚೇರಿ ಸೂಚನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ. 5: ವೀಸಾ ಶರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ವೀಸಾ ಅವಧಿ ಮುಗಿದ ಬಳಿಕ ಅಮೆರಿಕದಲ್ಲಿ ಅನಧಿಕೃತವಾಗಿ ವಾಸಿಸುವುದನ್ನು ತಡೆಯಬೇಕು ಎಂಬ ಸೂಚನೆಗಳನ್ನು ಅಮೆರಿಕವು ಭಾರತೀಯ ವೀಸಾದಾರರಿಗೆ ನೀಡಿದೆ.
ವೀಸಾ ಶರತ್ತುಗಳನ್ನು ಉಲ್ಲಂಘಿಸಿದರೆ ವೀಸಾ ರದ್ದತಿ, ಗಡಿಪಾರು ಮತ್ತು ಭವಿಷ್ಯದಲ್ಲಿ ಅಮೆರಿಕದ ವೀಸಾ ಪಡೆಯುವುದರಿಂದ ಅನರ್ಹತೆ ಮುಂತಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ನೀಡಿದೆ.
‘‘ನಿಮ್ಮ ಅಮೆರಿಕ ವೀಸಾದ ಶರತ್ತುಗಳನ್ನು ಗೌರವಿಸಿ ಮತ್ತು ಅಮೆರಿಕದಲ್ಲಿ ನಿಮ್ಮ ವಾಸ್ತವ್ಯಕ್ಕೆ ನೀಡಲಾಗಿರುವ ಅವಧಿಯನ್ನು ಮೀರಬೇಡಿ. ನೀವು ವೀಸಾ ಅವಧಿ ಮೀರಿ ವಾಸಿಸಿದರೆ ವೀಸಾ ರದ್ದತಿ, ಸಂಭಾವ್ಯ ಗಡಿಪಾರು ಮತ್ತು ಭವಿಷ್ಯದಲ್ಲಿ ವೀಸಾ ಪಡೆಯುವುದರಿಂದ ಅನರ್ಹತೆ ಮುಂತಾದ ಸಂಭಾವ್ಯ ಪರಿಣಾಮಗಳನ್ನು ನೀವು ಎದುರಿಸಬೇಕಾಗಬಹುದು. ವೀಸಾ ಅವಧಿಯನ್ನು ಮೀರಿ ಅಮೆರಿಕದಲ್ಲಿ ವಾಸಿಸುವುದು ನಿಮ್ಮ ಮುಂದಿನ ಅಮೆರಿಕ ಪ್ರಯಾಣ, ಅಲ್ಲಿನ ಕಲಿಕೆ ಅಥವಾ ಕೆಲಸದ ಶಾಶ್ವತ ಪರಿಣಾಮಗಳನ್ನು ಬೀರಬಹುದು’’ ಎಂದು ಅಮೆರಿಕ ರಾಯಭಾರ ಕಚೇರಿಯು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ತಿಳಿಸಿದೆ.
ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್ (ಸಂಸತ್) ಸದಸ್ಯೆ ಮ್ಯಾರ್ಜರಿ ಟೇಲರ್ ಗ್ರೀನ್ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳನ್ನು ಮತ್ತೊಮ್ಮೆ ಟೀಕಿಸಿದ ದಿನವೇ ಈ ಎಚ್ಚರಿಕೆ ಹೊರಬಿದ್ದಿದೆ. ಎಚ್-1ಬಿ ವೀಸಾಗಳನ್ನು ನಿಲ್ಲಿಸಬೇಕೆಂದು ಗ್ರೀನ್ ಕರೆ ನೀಡಿದ್ದಾರೆ





