ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ; ಇಂದು ಚಿನ್ನದ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಅಮೆರಿಕ- ಲ್ಯಾಟಿನ್ ಅಮೆರಿಕದ ಸಂಘರ್ಷದ ನಡುವೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಸೋಮವಾರ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆ ಕಾಣುವ ನಿರೀಕ್ಷೆಯಿದೆ.
ಶುಕ್ರವಾರ ತಡರಾತ್ರಿಯಲ್ಲಿ ವಿಶ್ವದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಗಳ ದೇಶಗಳ ನಡುವಿನ ಸಂಘರ್ಷದಿಂದಾಗಿ ಆರ್ಥಿಕ ವಲಯದಲ್ಲಿ ಭಾರೀ ಬದಲಾವಣೆಗಳ ನಿರೀಕ್ಷೆಯಿದೆ. ಅಮೆರಿಕ ಮತ್ತು ವೆನೆಜುವೆಲಾ ಸಂಘರ್ಷದ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ ನಿರೀಕ್ಷಿಸಲಾಗಿತ್ತು. ಅದರಂತೆಯೇ ಬೆಂಗಳೂರು ಮತ್ತು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ಷೇರುಮಾರುಕಟ್ಟೆ ಏರುಪೇರು ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆಯಾಗಿದೆ.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು (ಬೆಳಿಗ್ಗೆ)?
ಸೋಮವಾರ ಜನವರಿ 5 ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,740 (+158) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,595 (+145) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,305 (+118) ರೂ. ಬೆಲೆಗೆ ತಲುಪಿದೆ.
ದೇಶದಲ್ಲಿ ಚಿನ್ನದ ದರ ಏರಿಕೆ
ಜನವರಿ 5ರಂದು ಸೋಮವಾರ 24 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ಬೆಲೆಯು 13,740 ರೂಪಾಯಿ ಆಗಿದೆ. ಜನವರಿ ಮೊದಲ ವಾರಾಂತ್ಯಕ್ಕೆ ಹೋಲಿಸಿದರೆ 24 ಕ್ಯಾರೆಟ್ನ ಚಿನ್ನದ ಬೆಲೆಯು ಒಂದು ಗ್ರಾಂಗೆ 158 ರೂಪಾಯಿ ಹೆಚ್ಚಳವಾಗಿದೆ. 22 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ಬೆಲೆಯು 12,595 ರೂಪಾಯಿ ಆಗಿದೆ. ರವಿವಾರಕ್ಕೆ ಹೋಲಿಸಿದರೆ 145 ರೂಪಾಯಿ ಹೆಚ್ಚಳವಾಗಿದೆ. 18 ಕ್ಯಾರೆಟ್ನ ಚಿನ್ನದ ಬೆಲೆಯು ಒಂದು ಗ್ರಾಂಗೆ 10,305 ರೂಪಾಯಿ ಆಗಿದ್ದು, ರವಿವಾರಕ್ಕೆ ಹೋಲಿಸಿದರೆ 118 ರೂಪಾಯಿ ಹೆಚ್ಚಳವಾಗಿದೆ.
ಬೆಳ್ಳಿಯ ಬೆಲೆ ಹೇಗಿದೆ?
ಬೆಳ್ಳಿಯ ಬೆಲೆಯು ಪ್ರತಿ ಗ್ರಾಂಗೆ 247 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯು ವಾರಾಂತ್ಯಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ 6 ರೂ. ಏರಿದೆ. ಒಂದು ಕೆಜಿ ಬೆಳ್ಳಿ ಬೆಲೆ 2,47,000 ಸಾವಿರ ರೂ. ಆಗಿದೆ. ರವಿವಾರಕ್ಕೆ ಹೋಲಿಸಿದರೆ ಒಂದು ಕೆ.ಜಿ ಬೆಳ್ಳಿ ಬೆಲೆಯು 6,000 ಸಾವಿರ ರೂ. ಹೆಚ್ಚಳವಾಗಿದೆ.







