ತ್ರಿಭಾಷಾ ನೀತಿಗೆ ಸುಧಾಮೂರ್ತಿ ಬೆಂಬಲ

ಸುಧಾಮೂರ್ತಿ | PC : PTI
ಹೊಸದಿಲ್ಲಿ: ರಾಜ್ಯಸಭಾ ಸಂಸದೆ ಸುಧಾಮೂರ್ತಿ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯಡಿ ಜಾರಿಗೊಳಿಸಲಾಗಿರುವ ತ್ರಿಭಾಷಾ ನೀತಿಗೆ ತನ್ನ ಬೆಂಬಲವನ್ನು ಘೋಷಿಸಿದ್ದು, ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಕಲಿಯುವುದನ್ನು ಅದು ಉತ್ತೇಜಿಸುತ್ತದೆಯೆಂದು ಹೇಳಿದ್ದಾರೆ.
ಭಾಷೆಗಳ ಕಲಿಕೆಯಲ್ಲಿ ತನ್ನದೇ ಅನುಭವವನ್ನು ವಿವರಿಸಿದ ಆಕೆ, ‘‘ಹಲವು ಭಾಷೆಗಳನ್ನು ಓರ್ವ ವ್ಯಕ್ತಿ ಕಲಿಯಲು ಸಾಧ್ಯವೆಂಬುದನ್ನು ನಾನು ಯಾವತ್ತೂ ನಂಬಿಕೊಂಡೇ ಬಂದಿದ್ದೇನೆ. ಸ್ವತಃ ನಾನೇ 8 ಭಾಷೆಗಳನ್ನು ಕಲಿತೆದ್ದೇನೆ. ಹೀಗಾಗಿ ನಾನು ಕಲಿಕೆಯನ್ನು ಆನಂದಿಸತ್ತೇನೆ ಹಾಗೂ ಬಹುಭಾಷೆ ಕಲಿಕೆಯಿಂದ ಮಕ್ಕಳೂ ಕೂಡಾ ಬಹಳಷ್ಟು ಜ್ಞಾನ ಸಂಪಾದನೆ ಮಾಡಿಕೊಳ್ಳಬಹುದು ಎಂದವರು ಹೇಳಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಕೇಂದ್ರ ಸರಕಾರದ ತ್ರಿ ಭಾಷಾ ನೀತಿಯ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸಿದರು. ತಮಿಳುನಾಡು ಇಂಗ್ಲೀಷ್ ಹಾಗೂ ತಮಿಳು ಎಂಬ ದ್ವಿಭಾಷಾ ನೀತಿಯನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಬಂದಿದೆ. ‘ತೃತೀಯ ಬಾಷೆ’ ಕಲಿಕೆಯನ್ನು ಕಡ್ಡಾಯಗೊಳಿಸುವುದು ಸಂಪೂರ್ಣವಾಗಿ ಅಸ್ವೀಕಾರಾರ್ಹ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಜೆ.ಬಿ. ಮಾಥೆರ್ ಅವರು ಮಾತನಾಡಿ, ಭಾಷಾ ವಿಷಯವು ಒಂದು ಸೂಕ್ಷ್ಮವಾದ ಭಾವನಾತ್ಮಕ ವಿಷಯವೆಂದು ಬಿಜೆಪಿಯು ಮನವರಿಕೆ ಮಾಡಿಕೊಳ್ಳಬೇಕು. ಜನರ ಭಾವನೆಗಳಿಗೆ ಧಕ್ಕೆ ತರುವ ಯಾವುದ ವಿಷಯವನ್ನು ಉತ್ತೇಜಿಸಬಾರದು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅನಗತ್ಯವಾಗಿ ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುತ್ತದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅರು ಕೂಡಾ ತ್ರಿಭಾಷಾ ನೀತಿಗೆ ಡಿಎಂಕೆ ಸರಕಾರದ ವಿರೋಧವನ್ನು ರಾಜ್ಯಸಭೆಯಲ್ಲಿ ತೀವ್ರವಾಗಿ ಖಂಡಿಸಿದರು. ಸ್ಚಾಲಿನ್ ಸರಕಾರವು ತಮಿಳುನಾಡಿನಲ್ಲಿ ರಾಜಕೀಯ ಗೊಂದಲವನ್ನು ಸೃಷ್ಟಿಸುತ್ತದೆ ಹಾಗೂ ಮಕ್ಕಳಿಗೆ ಕಲಿಯುವ ಹಕ್ಕನ್ನು ನಿರಾಕರಿಸುತ್ತದೆ ಎಂದು ಆರೋಪಿಸಿದರು.