ಕೊಟ್ಟ ಮಾತು ಉಳಿಸಿಕೊಂಡ ಸುನೀಲ್ ಗಾವಸ್ಕರ್; ಜೆಮಿಮಾ ರೋಡ್ರಿಗಸ್ ಗೆ ವಿಶೇಷ ಉಡುಗೊರೆ!

ಸುನೀಲ್ ಗಾವಸ್ಕರ್ , ಜೆಮಿಮಾ ರೋಡ್ರಿಗಸ್ | Photo Credit : Jemimah Rodrigues/Instagram
ಹೊಸದಿಲ್ಲಿ: ಭಾರತದ ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಅವರು ಭಾರತೀಯ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಗೆ ಬ್ಯಾಟ್ ವಿನ್ಯಾಸದ ಗಿಟಾರ್ ಉಡುಗೊರೆ ನೀಡುವ ಮೂಲಕ ಅವರನ್ನು ಅಚ್ಚರಿಗೊಳಿಸಿದ್ದು, ತಾನು ನೀಡಿದ್ದ ಭರವಸೆಯನ್ನೂ ಪೂರೈಸಿದ್ದಾರೆ.
ಶುಕ್ರವಾರ ಬ್ಯಾಟ್ ವಿನ್ಯಾಸ ಹೊಂದಿರುವ ಸಾಂಪ್ರದಾಯಿಕ ಗಿಟಾರ್ ಅನ್ನು ಜೆಮಿಮಾ ರೋಡ್ರಿಗಸ್ ಗೆ ಉಡುಗೊರೆ ನೀಡಿದ ಸುನೀಲ್ ಗಾವಸ್ಕರ್, ಆಕೆಯೊಂದಿಗೆ ಕುಳಿತುಕೊಂಡು ಹರಟೆ ನಡೆಸಿದರು.
ಇದೇ ವೇಳೆ ಗವಾಸ್ಕರ್ ಜೆಮಿಮಾ ಜೊತೆ ಸೇರಿ ಹಾಡು ಹಾಡುವ ಮೂಲಕ ಈ ಹಿಂದೆ ತಾನು ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.
Next Story







